ಮಂಗಳೂರು, ಡಿ.17 (DaijiworldNews/HR): ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಓರ್ವರಿಗೆ ಹಾಡುಹಗಲಲ್ಲೇ ದುಷ್ಕರ್ಮಿಯೋರ್ವ ತಲವಾರು ದಾಳಿ ನಡೆಸಿ ಪರಾರಿಯಾದ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

ಮಂಗಳೂರಿನ ಬಂದರು ಠಾಣಾ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಣೇಶ್ ಕಾಮತ್ ಹಾಗೂ ಮಹಿಳಾ ಸಿಬ್ಬಂದಿಯೋರ್ವರು ನಗರದ ನ್ಯೂಚಿತ್ರ ಸರ್ಕಲ್ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರಲ್ಲಿ ಓರ್ವ ಬೈಕ್ನಿಂದ ಇಳಿದು ಪೊಲೀಸರು ಕುಳಿತುಕೊಂಡಲ್ಲಿಗೆ ಹೋಗಿ ಗಣೇಶ್ ಕಾಮತ್ಗೆ ಕತ್ತಿಯಿಂದ ಒಂದು ಬಾರಿ ಕಡಿದು ಓಡಿ ಬೈಕ್ ಏರಿ ಪರಾರಿಯಾಗಿದ್ದಾರೆ.
ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಣೇಶ್ ಕಾಮತ್ ಅವರ ಕೈಗೆ ಗಾಯವಾಗಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಹಲ್ಲೆಕೊರರ ಪೈಕಿ ಓರ್ವನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಇದೆ