ಮಂಗಳೂರು, ಡಿ.17 (DaijiworldNews/PY): ದೇರಳಕಟ್ಟೆಯ ಫೋಟೋಸ್ಪಾಟ್ ಸ್ಟುಡಿಯೋದ ಮಾಲೀಕ ಧರಣೇಶ್ ಕೊಣಾಜೆ (38) ಅವರು ಡಿ.16ರ ಬುಧವಾರದಂದು ಅಸೌಖ್ಯದಿಂದ ನಿಧರಾಗಿದ್ದಾರೆ.

ಧರಣೇಶ್ ಅವರು ಕೊಣಾಜೆಯ ಬೊಳ್ಳೆಕುಮೇರ್ ನಿವಾಸಿಯಾಗಿದ್ದು, ಲಕ್ಷ್ಮಣ ಹಾಗೂ ಸತ್ಯವತಿ ಅವರ ಪುತ್ರ.
ಹೃದಯ ಸಂಬಂಧಿ ತೊಂದರೆಯ ಹಿನ್ನೆಲೆ ಕಾರಣ ಧರಣೇಶ್ ಅವರನ್ನು ಕೆಲವು ದಿನಗಳವರೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ.
ಧರಣೇಶ್ ಅವರು ಮೊದಲು ಗಂಜಿಮಠದಲ್ಲಿನ ಎಸ್ಟಿಡಿ ಬೂತ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಸ್ಟಿಡಿ ಬೂತ್ನ ಪಕ್ಕದಲ್ಲಿ ಸ್ಟುಡಿಯೋವೊಂದಿತ್ತು. ಹಾಗಾಗಿ ಧರಣೇಶ್ಅವರಿಗೆ ಛಾಯಾಗ್ರಹಣದ ಮೇಲೆ ಆಸಕ್ತಿ ಬೆಳೆಯಿತು. ಧರಣೇಶ್ ಅವರ ಸೋದರಸಂಬಂಧಿಯೋರ್ವರು ಇವರಿಗೆ ದೇರಳಕಟ್ಟೆಯಲ್ಲಿ ಸ್ಟುಡಿಯೋವನ್ನು ಸ್ಥಾಪಿಸಿಲು ಬೆಂಬಲ ನೀಡಿದರು. ತಮ್ಮ ಕಠಿಣ ಪರಿಶ್ರಮದಿಂದ ಧರಣೇಶ್ ಅವರು ಛಾಯಾಗ್ರಹಣವನ್ನು ಕಲಿತು, ಕ್ಯಾಮೆರಾಗಳ ವಿವಿಧ ಆವೃತ್ತಿಯನ್ನು ಹೊಂದಿದ್ದರು.
ಮೃತರು ತಂದೆ, ತಾಯಿ ಇಬ್ಬರು ಸಹೋದರಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.
ಧರಣೇಶ್ ಅವರು ಉಳ್ಳಾಲ ಛಾಯಾಗ್ರಾಹಕ ಸಂಘದ ಸಕ್ರಿಯ ಸದಸ್ಯರಾಗಿದ್ದರು. ಇವರ ತಾಯಿ ಸತ್ಯವತಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ.