ಮಂಗಳೂರು, ಡಿ.17 (DaijiworldNews/PY): ಇನ್ಲ್ಯಾಂಡ್ ಬಿಲ್ಡರ್ಸ್ನ ಅಲ್ಟ್ರಾ ಮಾಡರ್ನ್ ವಾಣಿಜ್ಯ ಯೋಜನೆಯಾದ "ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್"ನ ಶಿಲಾನ್ಯಾಸ ಕಾರ್ಯಕ್ರಮವು ಡಿ.17ರ ಗುರುವಾರದಂದು ನಗರದ ಬಿಜೈಯಲ್ಲಿ ಸರ್ವಧರ್ಮ ಸಂಪ್ರದಾಯದಂತೆ ಧಾರ್ಮಿಕ ಪೂಜೆ, ದುವಾ, ಪ್ರಾರ್ಥನೆಯೊಂದಿಗೆ ನೆರವೇರಿತು.






































ಏತನ್ಮಧ್ಯೆ ಗಣ್ಯರು ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ಯೋಜನೆಯ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ರಾಧಾಕೃಷ್ಣ ದೇವಸ್ಥಾನದ ಆರ್ಚಕರಾದ ಗಿರಿಧರ್ ಭಟ್ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಸುರತ್ಕಲ್ ಈದ್ಗಾ ಮಸೀದಿಯ ಖತೀಬ್ ಪಿ.ಎಸ್ ಮುಹಮ್ಮದ್ ಖಾಮಿಲ್ ಸಖಾಫಿ ದುವಾ ನೆರವೇರಿಸಿದರು. ಕ್ರೈಸ್ತ ಧರ್ಮ ಗುರುಗಳಾದ ವಂ.ಜೆ.ಬಿ ಸಲ್ಡಾನಾ ಅವರು ಆಶೀರ್ವಚನ ನೀಡಿದರು. ಸಾಹಿಲ್ ಕಾರ್ಯಕ್ರಮ ಸಂಯೋಜಿಸಿದರು.
ಕಾರ್ಯಕ್ರಮದಲ್ಲಿ, ಸಂಸ್ಥೆಯ ವ್ಯವಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ವಹಾಜ್ ಯೂಸುಫ್ ಸಿರಾಜ್, ಮೆಹರಾಜ್ ಯೂಸುಫ್, ಶಾಸಕ ವೇದವ್ಯಾಸ್ ಕಾಮತ್, ಅಜಿತ್ ಕುಮಾರ್ ರೈ ಮಾಲಾಡಿ, ಉಮೇಶ್ ಪುತ್ರನ್, ವಿನ್ಯಾಸ್, ಗುತ್ತಿಗೆದಾರ ಮಹಾಬಲ, ದಿಲೀಪ್, ರೇಣುಕಾ ಚೌಟ, ನೀನಾ ಶೆಟ್ಟಿ, ಪಂಕಜ್ ಶೆಟ್ಟಿ, ಜಯಪ್ರಕಾಶ್, ಸುಧೀರ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
''ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್'' ತಳ, ನೆಲಮಹಡಿ ಮತ್ತು 4 ಆಂತಸ್ತುಗಳನ್ನು ಹೊಂದಿದ್ದು 345 ಚದರ ಅಡಿಯಿಂದ 4955 ಚದರ ಅಡಿವರೆಗಿನ ಆವರಣಗಳನ್ನು ಹೊಂದಿದೆ. ಮುಂಬೈನ ತಜ್ಞ ವಾಸ್ತುಶಿಲ್ಪಿಗಳು ಹಲವಾರು ನವೀನ ಕಟ್ಟಡ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಕಟ್ಟಡವನ್ನು ವಿನ್ಯಾಸಗೊಳಿಸಿದ್ದಾರೆ. ಈ ಮಳಿಗೆಯು ಉತ್ತಮವಾದ ಕಾರ್ ಪಾರ್ಕ್ ವ್ಯವಸ್ಥೆ, 2ಲಿಫ್ಟ್, ವಿಶಾಲ ಹಾಗೂ ಭವ್ಯವಾದ ಲಾಬಿ ಮತ್ತು ಕಡಿಮೆ ಇಂಧನ ಶಕ್ತಿದಕ್ಷತೆಯ ವ್ಯವಸ್ಥೆಯನ್ನು ಹೊಂದಿದೆ.
ಇನ್ಲ್ಯಾಂಡ್ ಬ್ಯುಸಿನೆಸ್ ಪಾರ್ಕ್ ಬಿಜೈ ಮುಖ್ಯ ರಸ್ತೆಯಲ್ಲಿ ನಿರ್ಮಾಣಗೊಳ್ಳುತಿದ್ದು, ಕೆ.ಎಸ್.ಆರ್.ಟಿ.ಸಿ. ಮತ್ತು ಭಾರತ್ ಮಾಲ್ಗೆ ಅತ್ಯಂತ ಸಮೀಪದಲ್ಲಿದೆ. ಈ ಪ್ರದೇಶವು ಎಂ.ಜಿ ರೋಡ್ ಮತ್ತು ವಿಮಾನ ನಿಲ್ದಾಣದ ನಡುವಿನ ಪ್ರಮುಖ ಮಾರ್ಗವಾಗಿದ್ದು ವೇಗವಾಗಿ ಅಭಿವೃದ್ದಿಗೊಳ್ಳುತ್ತಿರುವ ವಾಣಿಜ್ಯ ಕೇಂದ್ರವಾಗಿದೆ. ಪ್ರಧಾನಮಂತ್ರಿಯವರ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಂಗಳೂರು ಈಗಾಗಲೇ ಸೇರ್ಪಡೆಗೊಂಡಿದೆ. ಅಂತೆಯೇ ವಿಮಾನ ನಿಲ್ದಾಣ ಬಂದರು ಹಾಗೂ ಐಟಿ ಕ್ಷೇತ್ರಗಳಲ್ಲಿ ದೊಡ್ಡ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಇದರಿಂದ ವಾಣಿಜ್ಯ ಸಂಕೀರ್ಣಕ್ಕೆ ಭಾರೀ ಬೇಡಿಕೆಯು ಹೆಚ್ಚುತ್ತಿದೆ. ಮಂಗಳೂರಿನಲ್ಲಿ ಹೂಡಿಕೆ ಮಾಡುತ್ತಿರುವ ಬಹುತೇಕ ಕಂಪೆನಿಗಳು ಆಧುನಿಕ ಹಾಗೂ ಉತ್ತಮ ಗುಣಮಟ್ಟದ ಕಚೇರಿಯ ಸ್ಥಳಾವಕಾಶವನ್ನು ಹುಡುಕುತ್ತಿವೆ. ನಗರದಲ್ಲಿ ಪ್ರಮುಖ ಶೋ ರೂಂಗಳನ್ನು ಸ್ಥಾಪಿಸಲು ಬಯಸುವ ದೊಡ್ಡ ದೊಡ್ಡ ಆಭರಣ, ಜವಳಿ ಉದ್ಯಮದಾರರು ಮತ್ತು ಗ್ರಾಹಕ ಬ್ರಾಂಡ್ಗಳಿಂದ ಬೇಡಿಕೆ ಹೆಚ್ಚುತ್ತಿದೆ. ಶಿಪ್ಪಿಂಗ್, ಕ್ಲಿಯರೆನ್ಸ್, ಲಾಜೆಸ್ಟಿಕ್, ವಿಮಾ ಉದ್ಯಮದವರು ಮಂಗಳೂರು ಬಂದರಿನಿಂದ ಸ್ವಲ್ಪವೇ ದೂರದಲ್ಲಿರುವ ಈ ಪ್ರದೇಶದಲ್ಲಿ ಬಾಡಿಗೆ ಅಥವಾ ತಮ್ಮದೇ ಒಡೆತನದ ಮಳಿಗೆಗಳನ್ನು ಹುಡುಕುತಿದ್ದಾರೆ. ಬಿಜೈ ಪರಿಸರದಲ್ಲಿ ಹಲವಾರು ಬಹುಮಹಡಿ ಕಟ್ಟಡಗಳು ಪೂರ್ಣಗೊಳ್ಳುತ್ತಿದ್ದು ವೈದ್ಯಕೀಯ ಸೇವೆಗಳ ಬೇಡಿಕೆಯು ಅಲ್ಪಾವದಿಯಲ್ಲಿ ಏರಿಕೆಯಾಗುವ ಮುನ್ಸೂಚನೆ ಇದೆ. ಕಿಕ್ಕಿರಿದ ಜನಸಂದಣಿಯಿಂದಾಗಿ ಪಾರ್ಕಿಂಗ್ ಸಮಸ್ಯೆಯನ್ನು ಎದುರಿಸುತ್ತಿರುವ ಫಳ್ನೀರ್ ಮತ್ತು ಹಂಪನ್ಕಟ್ಟೆ ಪ್ರದೇಶದಿಂದ ವೈದ್ಯರುಗಳು ಉತ್ತಮ ಸ್ಥಳಾವಕಾಶವಿರುವ ಪ್ರದೇಶಗಳನ್ನು ಬಯಸುತ್ತಾರೆ. ಅಂತಹ ಉದ್ಯಮದಾರರಿಗೆ ಇದು ಒಂದು ಉತ್ತಮ ಅವಕಾಶ.