ಕಾಸರಗೋಡು, ಡಿ. 17 (DaijiworldNews/SM): ಫ್ಯಾಶನ್ ಗೋಲ್ಡ್ ಜುವೆಲ್ಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮ್ಯಾನೇಜರ್ ಜೈನುಲ್ ಅಬಿದ್(52) ಗುರುವಾರ ಕಾಸರಗೋಡು ಪೊಲೀಸರ ಮುಂದೆ ಶರಣಾಗಿದ್ದಾನೆ.

ಒಂದು ತಿಂಗಳಿನಿಂದ ಈತ ತಲೆಮರೆಸಿಕೊಂಡಿದ್ದನು. ಈತ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ತನಿಖಾ ತಂಡದ ಮುಂದೆ ಹಾಜರಾಗುವಂತೆ ಆದೇಶಿಸಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಶಾಸಕ ಎಂ. ಸಿ. ಕಮರುದ್ದೀನ್ ನನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ. ಪೂಕೋಯ ತಂಗಳ್ ತಲೆಮರೆಸಿ ಕೊಂಡಿದ್ದಾನೆ. ಈತನ ಪುತ್ರ ಶಮೀಮ್ ಕೂಡಾ ತಲೆಮರೆಸಿಕೊಂಡಿದ್ದಾನೆ. ಮೂವರ ವಿರುದ್ಧ ಲುಕ್ ಔಟ್ ನೋಟಿಸ್ ಬಿಡುಗಡೆಗೊಳಿಸಲಾಗಿತ್ತು.