ಕೊಣಾಜೆ, ಡಿ. 18 (DaijiworldNews/SM): ಅಸೈಗೋಳಿಯಲ್ಲಿ ಕೆಎಸ್ ಆರ್ ಪಿಯಲ್ಲಿ ಪೊಲೀಸ್ ಸಿಬ್ಬಂದಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ಕೊಣಾಜೆ ಅಸೈಗೋಳಿಯ ಪೊಲೀಸ್ ವಸತಿ ಗೃಹದಿಂದ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಅಸೈಗೋಳಿಯ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಏಳನೇ ಬೆಟಾಲಿಯನ್ ನ ಸಿಬ್ಬಂದಿ ಅನಿಲ್ ಕುಮಾರ್(29) ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಚಿಕ್ಕ ಮಂಗಳೂರು ಜಿಲ್ಲೆ ಮೂಲದವರಾಗಿರುವ ಅನಿಲ್ ಅವರು ತಾಯಿ, ಪತ್ನಿಯೊಂದಿಗೆ ಅಸೈಗೋಳಿಯ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು. ಗುರುವಾರ ಸಂಜೆಯಿಂದ ಅವರು ನಾಪತ್ತೆಯಾಗಿದ್ದು ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಟುಂಬದ ಕಲಹದ ಕಾರಣದಿಂದ ಬೇಸತ್ತು ಅವರು ನಾಪತ್ತೆಯಾಗಿರಬಹುದು ಎಂದು ಸಂಶಯ ವ್ಯಕ್ತವಾಗಿದೆ.