ಕಾಸರಗೋಡು, ಡಿ. 18 (DaijiworldNews/SM): ತಮಿಳುನಾಡು ಮೂಲದ ವ್ಯಕ್ತಿಯೋರ್ವರು ಸಮುದ್ರಪಾಲಾಗಿ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಮೃತಪಟ್ಟವರನ್ನು ಮದುರೈ ಪೊಳ್ಳಾಚಿ ನಿವಾಸಿ ಪ್ರಸ್ತುತ ನಗರ ಹೊರವಲಯದ ಸೂರ್ಲುವಿನಲ್ಲಿ ವಾಸವಾಗಿರುವ ಅಣ್ಣಾದೊರೈ(55) ಎಂದು ಗುರುತಿಸಲಾಗಿದೆ. ಸಂಜೆ ಕುಟುಂಬಸ್ಥರೊಂದಿಗೆ ನೆಲ್ಲಿಕುಂಜೆಯಲ್ಲಿರುವ ಬಂದರಿಗೆ ತಲಪಿದ್ದ ಇವರು ಮರಳುತ್ತಿದ್ದಾಗ ಸಮುದ್ರಕ್ಕಿಳಿದು ಕಾಲು ತೊಳೆಯುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿದ್ದಾರೆ. ಜೊತೆಗಿದ್ದವರು ರಕ್ಷಿಸಲೆತ್ನಿಸಿದರೂ ಸಾಧ್ಯ ವಾಗಲಿಲ್ಲ.
ಬಳಿಕ ಅಲ್ಲಿದ್ದ ಬೆಸ್ತರ ನೆರವಿನಿಂದ ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ೪೦ ವರ್ಷಗಳಿಂದ ಕಾಸರಗೋಡಿನಲ್ಲಿರುವ ಅಣ್ಣಾ ದೊರೈ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದರು. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.