ಮಂಗಳೂರು, ಜೂ 18: ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭ ವರ್ಗಾವರ್ಣೆಗೊಂಡಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಇಂದು ಅಧಿಕಾರ ಸ್ವೀಕರಿಸಿದರು. ಇವರಿಗೆ ನಿರ್ಗಮನ ಪೊಲೀಸ್ ಕಮೀಷನರ್ ವಿಪುಲ್ ಕುಮಾರ್ ಅಧಿಕಾರ ಹಸ್ತಾಂತರಿಸಿದರು.
ಮಂಗಳೂರು ಪೊಲೀಸ್ ಕಮೀಷನರ್ ಹುದ್ದೆಯಿಂದ ವರ್ಗಾವಣೆ ಗೊಂಡಿರುವ ವಿಪುಲ್ ಕುಮಾರ್ ಅವರು ಇಂದು ಅಧಿಕಾರ ಹಸ್ತಾಂತರಕ್ಕೆ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ವಿಪುಲ್ ಕುಮಾರ್, ಮಂಗಳೂರಿಗರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರಿನ ಜನರು ಶಾಂತಿಪ್ರಿಯರು. ಆದಾಗ್ಯೂ ಮಂಗಳೂರಿನ ಬಗ್ಗೆ ಕೋಮುಗಲಭೆಯ ನಗರ ಎಂಬ ಹಣೆಪಟ್ಟಿಯಿದೆ. ಇದಕ್ಕೆ ಇಲ್ಲಿ ನಡೆಯುವ ಒಂದಷ್ಟು ಘಟನೆಗಳೇ ಕಾರಣ. ಕೆಲವೇ ಕೆಲವು ಸಮಾಜದ್ರೋಹಿಗಳಿಂದ ಮಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ಆದರೆ ಬಹುಪಾಲು ಜನ ಶಾಂತಿ ಬಯಸುತ್ತಾರೆ. ಇನ್ನು ಉಳಿದ ಸಮಾಜ ದ್ರೋಹಿಗಳ ವಿರುದ್ಧದ ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸರು ಸಮರ್ಥರಿದ್ದಾರೆ ಎಂದು ತಿಳಿಸಿದರು.