ಸುಳ್ಯ, ಡಿ.19 (DaijiworldNews/HR): ಕೇರಳ ಮೂಲದ ಆಸಿಯಾ ಅನೇಕ ದಿನಗಳಿಂದ ಸುಳ್ಯ ಕಟ್ಟೆಕಾರ್ಸ್ ಪೂಟ್ವೇರ್ನಲ್ಲಿ ಧರಣಿ ನಿರತರಾಗಿದ್ದು ತನ್ನ ಪತಿ ಇಬ್ರಾಹಿಂ ಖಲೀಲ್ಗೆ ಹಾಗೂ ಆವರ ಕುಟುಂಬಸ್ಥರಿಗೆ ಸೇರಿದ ನಾವೂರು ಮನೆಗೆ ಶುಕ್ರವಾರ ಮುಂಜಾನೆ 5 ಗಂಟೆಗೆ ಸೇರಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಆಸಿಯಾ ಹಾಗೂ ಇಬ್ರಾಹಿಂ ಖಲೀಲ್ ಕುಟುಂಬಕ್ಕೂ ಜಗಳವಾಗಿ ಖಲೀಲ್ ಅಣ್ಣ ಸಿಯಾಬ್ ತನ್ನ ಮೊಬೈಲ್ ಎಳೆದುಕೊಂಡು ಹೋಗಿದ್ದಾನೆ ಎಂದು ಆಸಿಯಾ ಆರೋಪ ಮಾಡಿದ್ದಾರೆ.
ಜೊತೆಗೆ ಮಾನವೀಯತೆ ದೃಷ್ಟಿಯಿಂದ ಧರ್ಮದ ಬೇಧವಿಲ್ಲದೆ ನನಗೆ ಸಹಾಯ ಮಾಡಿ, ನನ್ನ ಜೀವಕ್ಕೆ ಏನೆದಾರೂ ತೊಂದರೆಯಾರೆ ಇಬ್ರಾಹಿಂ ಖಲೀಲ್ ಮನೆಯವರೆ ಕಾರಣ ಎಂದು ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.