ಮಂಗಳೂರು, ಡಿ.19 (DaijiworldNews/MB) : ಮಂಗಳೂರಿನ ರಥಬೀದಿಯ ಬಳಿಯ ನ್ಯೂ ಚಿತ್ರ ಟಾಕೀಸ್ ಮುಂಭಾಗದಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೆಬಲ್ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಗಳು ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಇಲ್ಲಿರುವ ನ್ಯೂ ಚಿತ್ರ ಜಂಕ್ಷನ್ ಬಳಿ ಬಂದರು ಠಾಣೆಯ ಹೆಡ್ ಕಾನ್ಸ್ಟೇಬಲ್ ಗಣೇಶ್ ಕಾಮತ್ ಹಾಗೂ ಇಬ್ಬರು ಮಹಿಳಾ ಕಾನ್ಸ್ಟೆಬಲ್ಗಳು ವಾಹನಗಳನ್ನು ಪರಿಶೀಲಿಸುತ್ತಿದ್ದಾಗ ಸ್ಕೂಟರ್ನ ಸಹಸವಾರ ಗಣೇಶ್ ಕಾಮತ್ ಅವರ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದಾನೆ. ಈ ವಿಷಯದಲ್ಲಿ ಈ ವಿಷಯದಲ್ಲಿ ಪ್ರಕರಣ ದಾಖಲಾಗಿದೆ.
ಈ ದಾಳಿಗೆ ಕಾರಣ ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಸಣ್ಣ ಪ್ರಾಯದವನಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆಯಿಂದ ಪೊಲೀಸರಿಗೆ ಆಶ್ಚರ್ಯ ಉಂಟಾಗಿದೆ.
ಇತ್ತೀಚಿನ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಸ್ ಹೇಳಿದರು.
ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಒಂದು ವರ್ಷವಾಗುವ ಕೆಲವು ದಿನಗಳ ಹಿಂದ ಈ ಘಟನೆ ನಡೆದಿದೆ. ಅದಕ್ಕೂ ಮುನ್ನ ನಗರದ ಎರಡು ಸ್ಥಳಗಳಲ್ಲಿ ಇತ್ತೀಚೆಗೆ ಪ್ರಚೋಧನಕಾರಿ ಗೋಡೆಬರಹಗಳು ಕಾಣಿಸಿಕೊಂಡಿತ್ತು.
ಈ ಎಲ್ಲಾ ಘಟನೆಗಳ ಹಿನ್ನೆಲೆ ಪೊಲೀಸರು ರಾತ್ರಿಯಲ್ಲಿ ಗಸ್ತು ತಿರುಗುವ ಕಾರ್ಯವನ್ನು ನಡೆಸುತ್ತಿದ್ದಾರೆ. ಈ ಹಿಂದೆ ಒಂದು ಅಥವಾ ಎರಡು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದ ಸ್ಥಳದಲ್ಲಿ ಈಗ ನಾಲ್ಕರಿಂದ ಐದು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.