ಉಡುಪಿ,ಸೆ 25 : ಲಾರಿಗಳಿಗೆ ಜಿ ಪಿ ಎಸ್ ಅಳವಡಿಕೆ ವಿಚಾರದಲ್ಲಿ ಲಾರಿ ಮಾಲಕರ ಹಾಗೂ ಇಲ್ಲಿನ ಜಿಲ್ಲಾಡಳಿತ ನಡುವಿನ ಭಿನ್ನಭಿಪ್ರಾಯ ಹಾಗೂ ಗೊಂದಲ ಇನ್ನೂ ಮುಂದುವರಿದಿದೆ. ಜಿಲ್ಲಾಡಳಿತ ಹಾಗೂ ಲಾರಿ ಮಾಲಕರ ನಡುವೆ ಹಲವು ಸಭೆಗಳು ನಡೆದರೂ ಜಿ ಪಿ ಎಸ್ ಅಳವಡಿಕೆ ವಿಚಾರದಲ್ಲಿ ಲಾರಿ ಮಾಲಕರು ಇನ್ನೂ ಗೊಂದಲದಲ್ಲಿದ್ದಾರೆ. ಈ ಹಿಂದೆ ಆಳವಡಿಸಲಾಗಿರುವ ಜಿ ಪಿ ಎಸ್ನಲ್ಲಿ ಐ ಎಸ್ ಒ ಮಾರ್ಕ್ ಇಲ್ಲ ಎಂಬ ಕಾರಣಕ್ಕಾಗಿ ಜಿಲ್ಲಾಡಳಿತ ನಿಷೇದ ಹೇರಿದೆ. ಈಗ ಬೆಂಗಳೂರು ಮೂಲದ ಕಂಪನಿಯಿಂದ ಆಳವಡಿಸಲಾಗಿರುವ ಜಿ ಪಿ ಎಸ್ಗೆ ದುಬಾರಿ ಬೆಲೆ ಇದೆ. ಜಿಲ್ಲಾಡಳಿತದ ಒತ್ತಡಕ್ಕೆ ಮಣಿದು ಹೊಸ ಜಿ ಪಿ ಎಸ್ ಆಳವಡಿಸಲು ಲಾರಿ ಮಾಲಕರು ಮುಂದಾಗಿದ್ದಾರೆ. ಈ ಹಿಂದೆ ಜಿ ಪಿ ಎಸ್ ಆಳವಡಿಸುವ ಸಂದರ್ಭ ಜಿಲ್ಲಾಡಳಿತಕ್ಕೆ ಅದರಲ್ಲಿ ಐ ಎಸ್ ಒ ಮಾರ್ಕ್ ಇಲ್ಲ ಎಂಬುವುದು ಗಮನಕ್ಕೆ ಬಂದಿಲ್ಲವೇ ಎಂದು ಲಾರಿ ಮಾಲಕರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ. ಜಿಲ್ಲಾಡಳಿತದ ಬೇಜವಬ್ದಾರಿಯಿಂದ ಈ ಹಿಂದೆ ಆಳವಡಿಸಲಾಗಿರುವ ಜಿ ಪಿ ಎಸ್ ಈಗ ನಿಷ್ಪ್ರಯೋಜಕವಾಗಿದ್ದು ಇದರ ನಷ್ಟವನ್ನು ಲಾರಿ ಮಾಲಿಕರು ಅನುಭವಿಸಬೇಕಾಗಿದೆ. ಜಿಲ್ಲಾಡಳಿತ ತನ್ನಿಂದ ಆದ ತಪ್ಪನ್ನು ಸರಿಪಡಿಸುವ ಬದಲು ಲಾರಿ ಮಾಲಕರ ಮೇಲೆ ಜಿ ಪಿ ಎಸ್ ಹೊರೆಯನ್ನು ಹೇರಿದೆ. ಇದನ್ನು ತಕ್ಷಣ ಸರಿಪಡಿಸದಿದ್ದರೆ ಕಾನೂನಾತ್ಮಕ ಹೋರಾಟದ ಎಚ್ಚರಿಕೆಯನ್ನು ಲಾರಿ ಮಾಲೀಕರ ಸಂಘದ ಅದ್ಯಕ್ಷ ಚಂದ್ರು ಪೂಜಾರಿ ನೀಡಿದ್ದಾರೆ.