ಬೆಳ್ತಂಗಡಿ, ಡಿ.19 (DaijiworldNews/HR): ಉಜಿರೆಯಲ್ಲಿ ಮನೆಮುಂದೆ ಆಟವಾಡುತ್ತಿದ್ದ ಅನುಭವ್ (8) ಅಪಹರಣಕ್ಕೊಳಗಾಗಿದ್ದು, ಇಂದು ಕೋಲಾರದಲ್ಲಿ ತನ್ನ ತಾಯಿ ಮಡಿಲು ಸೇರಿದ್ದಾನೆ.

ಬಾಲಕನನ್ನು ಕಂಡು ತಾಯಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಕೋಲಾರದಲ್ಲಿ ಬಾಲಕನನ್ನು ಪತ್ತೆ ಹಚ್ಚಿ ನಾಲ್ವರು ಅಪಹರಣಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರದಂದು ಉಜಿರೆಯ ರಥಬೀದಿ ಅಶ್ವತ್ಥ ಕಟ್ಟೆ ಸಮೀಪದ ಮನೆ ಮುಂದೆ ಆಟವಾಡುತ್ತಿದ್ದ ಬಾಲಕನನ್ನು ಅಪಹರಣ ನಡೆಸಿದ ದುಷ್ಕರ್ಮಿಗಳು 17 ಕೋ.ರೂ. ಗೆ ಬೇಡಿಕೆಯಿಟ್ಟಿದ್ದು, ಈ ಪ್ರಕರಣ ಸಾಕಷ್ಟು ಆತಂಕ ಸೃಷ್ಟಿಸಿತ್ತು.
ಇನ್ನು ಕೋಲಾರದ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣಕಾರರನ್ನು ಮಗುವಿನೊಂದಿಗೆ ವಿಶೇಷ ತಂಡ ಪೊಲೀಸರು ಶನಿವಾರ ಬೆಳಗ್ಗೆ 5 ಗಂಟೆಗೆ ಪತ್ತೆ ಹಚ್ಚಿ, ತಕ್ಷಣ ಅಪಹರಣಕಾರರನ್ನು ಕೋಲಾರ ಪೊಲೀಸ್ ಠಾಣೆಗೆ ಕರೆತರಲಾಯಿತು.