ಬ್ರಹ್ಮಾವರ, ಡಿ.19 (DaijiworldNews/MB) : ಡಿಸೆಂಬರ್ 18 ಶುಕ್ರವಾರದಂದು ತಾಲ್ಲೂಕಿನ ಕೋಟ ಗ್ರಾಮ ಪಂಚಾಯತ್ ಮಿತಿಯೊಳಗಿನ ಕಾಸನಗುಂದು ಪ್ರದೇಶದಿಂದ ನಡೆದ ಹೆಜ್ಜೇನು ದಾಳಿಯಿಂದಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರು ಮಹಿಳೆಯರು ಗಂಭೀರ ಗಾಯಗೊಂಡು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.





ಶುಕ್ರವಾರ ಸಂಜೆ ಮಹಿಳೆಯರು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಹೆಜ್ಜೇನುಗಳು ದಾಳಿ ನಡೆಸಿದವು. ಗಾಯಗೊಂಡ ಐವರನ್ನು ಚಿಕಿತ್ಸೆಗಾಗಿ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರು ಮಹಿಳೆಯರ ಪೈಕಿ ಓರ್ವರಾದ ಪ್ರೇಮಾ ಯಾನೆ ಬುಡ್ಡು ತೀವ್ರ ದಾಳಿಗೆ ಒಳಗಾಗಿದ್ದರಿಂದ, ಆಕೆಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಕಾವೇರಿ, ಪದ್ದು ಸುಶೀಲ ಅವರನ್ನು ಕೋಟೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಲಚ್ಚಿ ಕೋಟಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಮಹಿಳೆಯರನ್ನು ಇತರ ಗ್ರಾಮಸ್ಥರ ಸಹಾಯದಿಂದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಹದ್ದು ಜೇನಿನ ಗೂಡಿನ ಮೇಲೆ ದಾಳಿ ನಡೆಸಿದ ಪರಿಣಾಮ ಕೂಡಲೇ ಜೇನುಗಳು ಹೊಲದಲ್ಲೇ ಇದ್ದ ಮಹಿಳೆಯರ ಮೇಲೆ ದಾಳಿ ಮಾಡಿದೆ ಎಂದು ಶಂಕಿಸಲಾಗಿದೆ.
ಜೇನುನೊಣಗಳು ಅವರ ಮೇಲೆ ದಾಳಿ ಮಾಡಿದಾಗ, ಮಹಿಳೆಯರು ಸಹಾಯಕ್ಕಾಗಿ ಕೂಗಿದ್ದು ಸಮೀಪದ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದರು. ಸ್ಥಳೀಯ ಮಹಿಳೆ, ಸಿಂಚನಾ ಅಪಾಯವನ್ನು ಕಂಡು ಮಹಿಳೆಯರ ಮೇಲೆ ಹಲ್ಲೆ ಮಾಡಿದ ಜೇನುನೊಣಗಳನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಅವರು ಆಂಬುಲೆನ್ಸ್ಗೆ ಕರೆ ಮಾಡಿ ಮಹಿಳೆಯರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡಿದರು.