ಉಡುಪಿ, ಡಿ.19 (DaijiworldNews/PY): ಕರ್ನಾಟಕದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದ ವಿಡಿಯೋ ಕಾನ್ಫರೆನ್ಸ್ನಲ್ಲ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭಾಗವಹಿಸಿದರು.










ಸುಮಾರು 10,904 ಕೋಟಿ ವೆಚ್ಚದ 1,197 ಕಿ.ಮೀ ಉದ್ದದ ಹೆದ್ದಾರಿ ಯೋಜನೆಯನ್ನು ಶನಿವಾರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿ ಶೋಭಾ, "ನಿತಿನ್ ಗಡ್ಕರಿ ಅವರು ಸಾರಿಗೆ ಹಾಗೂ ಹೆದ್ದಾರಿಗಳ ಸಚಿವರಾದ ಬಳಿಕ ರಾಷ್ಟ್ರ ಹೆದ್ದಾರಿ ನಿರ್ಮಾಣ ಕಾರ್ಯವು ಮೊದಲಿಗಿಂತಲೂ ವೇಗ ಪಡೆದುಕೊಂಡಿದೆ. ಇದು ಪ್ರಧಾನಿ ಮೋದಿ ಸರ್ಕಾರದ ಕಾರ್ಯಕ್ಷಮತೆಯನ್ನು ದ್ವಿಗುಣಗೊಳಿಸಿದೆ. ರಾಜ್ಯಕ್ಕೆ ಸಾರಿಗೆ ಸಚಿವರ ಕೊಡುಗೆ ಅದ್ಭುತ" ಎಂದರು.
ಇಂದು ಗಡ್ಕರಿ ಅವರು ಕುಂದಾಪುರದಿಂದ ಹೊನ್ನಾವರಕ್ಕೆ ಎನ್ಎಚ್ -17 ನಿರ್ಮಾಣ ಕಾರ್ಯ ಯೋಜನೆಯನ್ನು ಉದ್ಘಾಟಿಸಿದರು.
"ಮಲ್ಪೆ-ತೀರ್ಥಹಳ್ಳಿ ಕಾರ್ಯದ ಒಂದು ಭಾಗವನ್ನು ಪೂರ್ತಿ ಮಾಡಲಾಗಿದೆ. ಮುಂದಿನ ನಿರ್ಮಾಣ ಕಾರ್ಯಗಳಿಗೆ ಟೆಂಡರ್ ಮಾಡಲಾಗಿದೆ. ಪರ್ಕಳ ಪ್ರದೇಶಕ್ಕೆ ತ್ರಿಡಿ ವಿನ್ಯಾಸವನ್ನು ಮಾಡಲಾಗಿದೆ. ಉಡುಪಿಯಲ್ಲಿ ಭೂಸ್ವಆಧಿನವೇ ಒಂದು ಸಮಸ್ಯೆಯಾಗಿದೆ. ಒಮ್ಮೆ ಭೂಸ್ವಾಧೀನದ ಕಾರ್ಯ ಮುಗಿದರೆ, ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭವಾಗುತ್ತದೆ" ಎಂದರು.
"ಕುಂದಾಪುರ ಶಾಸ್ತ್ರಿ ವೃತ್ತ ನಿರ್ಮಾಣ ಕಾರ್ಯವು ಹಲವಾರು ಕಾರಣಗಳಿಂದ ವಿಳಂಬವಾಗುತ್ತಿದೆ. ಈ ವೃತ್ತ ಮೂರು ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ಕೊರೊನಾ ಕಾರಣ ಎಲ್ಲಾ ನಿರ್ಮಾಣ ಯೋಜನೆಗಳು ನಿಧಾನವಾಗುತ್ತವೆ" ಎಂದು ಹೇಳಿದರು.
"ರಸ್ತೆ ಅಗಲೀಕರಣ ಯೋಜನೆಗಾಗಿ ನಾವು ಮಲ್ಪೆಯಿಂದ ಕರಾವಳಿಗೆ ಭೂಸ್ವಾಧೀನಕ್ಕೆ ಅನುಮತಿ ಪಡೆದಿದ್ಧೇವೆ. ಹಳೆಯ ರೈಲ್ವೆ ಸೇತುವೆಯ ಸ್ಥಳದಲ್ಲಿ ಸೇತುವೆ ನಿರ್ಮಿಸಲು ನಮಗೆ ರೈಲ್ವೆ ಇಲಾಖೆಯಿಂದ ಅನುಮತಿ ಸಿಕ್ಕಿದೆ" ಎಂದರು.
ಎ"ಲ್ಲಾ ರಸ್ತೆ ಯೋಜನೆಗಳು ಆರ್ಥಿಕ ಕಾರಿಡಾರ್, ಕರಾವಳಿ ಹಾಗೂ ದೂರದ ಪ್ರದೇಶಗಳಿಗೆ ಪ್ರವೇಶ ಒದಗಿಸುತ್ತದೆ. ಇದು ಸಂಪರ್ಕ ಹಾಗೂ ಅಭಿವೃದ್ಧಿಯನ್ನು ಸುಧಾರಿಸುತ್ತದೆ. ಇನ್ನು ಕೃಷಿ, ಮೀನುಗಾರಿಕೆ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಪ್ರಾಮುಖ್ಯತೆ ನೀಡುತ್ತದೆ" ಎಂದು ನಿತಿನ್ ಗಡ್ಕರಿ ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ನಗರಸಭೆ ಮಂಡಳಿಯ ಅಧ್ಯಕ್ಷ ಸುಮಿತ್ರ ಆರ್ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.