ಉಡುಪಿ, ಡಿ.19 (DaijiworldNews/PY): "ಪಡಿತರರು ಅಕ್ಕಿ ಮಾರಾಟ ಮಾಡಿದರೆ ದಂಡ, ಆರು ತಿಂಗಳು ಕಾರ್ಡು ಅಮಾನತು ಮಾಡಲಾಗುವುದು" ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

"ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ದತಿ 2016ರ ನಿಯಮ 18ಎ ರ ತಿದ್ದುಪಡಿ ಆದೇಶ-2020ರ ಪ್ರಕಾರ, ಪಡಿತರ ಚೀಟಿದಾರರು ನೀಡುವ ಆಹಾರಧಾನ್ಯವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅಥವಾ ಮಾರಾಟ ಮಾಡಲು ದಾಸ್ತಾನು ಮಾಡಿದವರ ವಿರುದ್ಧ ಮುಕ್ತ ಮಾರುಕಟ್ಟೆ ದರದಲ್ಲಿ ದಂಡ ವಿಧಿಸಲಾಗುವುದು ಮತ್ತು ಆರು ತಿಂಗಳವರೆಗೆ ಅವರ ಕಾರ್ಡ್ ಅನ್ನು ಅಮಾನತು ಮಾಡಲಾಗುವುದು" ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.