ಮಂಗಳೂರು ಜೂ 18 : ಪಣಂಬೂರು ಬೀಚ್ ನಲ್ಲಿ ಪಣಂಬೂರು ಬೀಚ್ ನಲ್ಲಿ ಕಾಣಿಕೊಂಡ ಸುಂಟರಗಾಳಿ - ಪ್ರವಾಸಿಗರು ಆತಂಕ ಜೂ 18 ರ ಸೋಮವಾರ ಸಂಜೆ ವೇಳೆ ಸುಳಿ ಗಾಳಿ ಎದ್ದು ಪ್ರವಾಸಿಗರು ಹಾಗೂ ಸ್ಥಳದಲ್ಲಿದ್ದ ಜನರು ಆತಂಕಕ್ಕೀಡಾದ ಘಟನೆ ನಡೆದಿದೆ. ತತಕ್ಷಣ ಬೀಚ್ ರಕ್ಷಣಾದಳ ಸಿಬ್ಬಂದಿ ಸೈರನ್ ಮೊಳಗಿಸಿ ಬೀಚ್ ನಿಂದ ದೂರ ಸರಿಯುವಂತೆ ಮುನ್ನೆಚ್ಚರಿಕೆ ನೀಡಲಾಯಿತು.
ಸಂಜೆ 6.30 ರಿಂದ 6.45 ರ ಸುಮಾರಿಗೆ ಸಮುದ್ರದಲ್ಲಿ ಕಣ್ಣಿಗೆ ಕಾಣಿಸಿಕೊಂಡ ಸುಂಟರಗಾಳಿ ಬಳಿಕ ಎನ್ ಎಂ ಪಿಟ್ ಯಾರ್ಡ್ ಒಳಗೆ ಸಾಗುತ್ತಾ ರಾಷ್ಟ್ರೀಯ ಹೆದ್ದಾರಿ ಕಡೆ ಸರಿದು ಹೋಯಿತು. ಇದೇ ಸಂದರ್ಭ ಸುರತ್ಕಲ್ , ಪಣಂಬೂರು, ಕೃಷ್ಣಾಪುರ ಮತ್ತಿತರೆಡೆ ಬಲವಾದ ಗಾಳಿಯೊಂದಿಗೆ ಮಳೆ ಸುರಿಯಿತು. ಆಳ ಸಮುದ್ರದಲ್ಲಿ ಸುಂಟರಗಾಳಿ ಎದ್ದಿದ್ದು, ಸಮುದ್ರ ತೀರದತ್ತಾ ಸಾಗುತ್ತಾ ಬಂದಿರಬೇಕು , ದಡದಲ್ಲಿದ್ದ ಯಾವುದೇ ವಸ್ತು ಅಂಗಡಿಗಳಿಗೆ ಹಾನಿಯಾಗಿಲ್ಲ ಎಂದು ಸಿಇಒ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.