ಮಂಗಳೂರು, ಡಿ.20 (DaijiworldNews/PY): ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ, ಉದ್ಯಮಿ, ಮಂಜೇಶ್ವರ ಮದನಂತೇಶ್ವರ ದೇವಾಲಯದ ಮಾಜಿ ಟ್ರಸ್ಟಿ ಮಂಜೇಶ್ವರ ಪದ್ಮನಾಭ್ ಕಾಮತ್ (94) ಅವರು ಡಿ.20ರ ರವಿವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಪದ್ಮನಾಭ್ ಕಾಮತ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರಾಗಿದ್ದು, ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಸುಮಾರು ಒಂದುವರೆ ವರ್ಷಗಳ ಕಾಲ ಕೇರಳ ಕಣ್ಣೂರು ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸಿದ್ದರು. ಇವರು ಮಂಜೇಶ್ವರ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ.
ಕಾಮತ್ ಅವರು ಮತ್ಸೋದ್ಯಮ ಸೇರಿದಂತೆ ಟ್ರಾನ್ಸ್ಪೋರ್ಟ್ ಹಾಗೂ ನಾನಾ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು.
ಇವರು ಪುತ್ರ ಮೋಹನ್ ದಾಸ್ ಕುವೈಟ್ ಸೇರಿದಂತೆ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.