ಮೂಡುಬಿದಿರೆ, ಡಿ. 20 (DaijiworldNews/SM): ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ರವಿವಾರ ನಡೆದ ಚಂಪಾ ಷಷ್ಠಿ ಮಹೋತ್ಸವದ ಅನ್ನಸಂತರ್ಪಣೆ ವೇಳೆ ನಡೆದ ಪಂಕ್ತಿಬೇಧದ ಬಗ್ಗೆ ಭಕ್ತರು ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಕಳೆದ ವರ್ಷ ಈ ರೀತಿಯ ಪಂಕ್ತಿಬೇಧದ ವಿಚಾರದಲ್ಲಿ ವಿವಾದ ಉಂಟಾಗಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆ ಬಳಿಕ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಮುಂದೆ ಇಲ್ಲಿ ಪಂಕ್ತಿಬೇಧಕ್ಕೆ ಅವಕಾಶ ನೀಡುವುದಿಲ್ಲವೆಂದು ಭರವಸೆ ನೀಡಿದ್ದರು. ಆದರೆ ಈ ಬಾರಿಯೂ ಕೆಲವರಿಗೆ ಪ್ರತ್ಯೇಕ ಭೋಜನದ ವ್ಯವಸ್ಥೆ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಯಿತು. ಬಳಿಕ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.