ಸೌತಡ್ಕ, ಡಿ.21 (DaijiworldNews/PY): ದರೋಡೆಕೋರರ ತಂಡವೊಂದು ವ್ಯಕ್ತಿಯೋರ್ವರ ಮನೆಗೆ ನುಗ್ಗಿ, ಮನೆ ಮಾಲಿಕನನ್ನು ಕಟ್ಟಿ ಹಾಕಿ ದರೋಡೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.













ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ಸೌತಡ್ಕ ಮಹಾಗಣಪತಿ ದೇವಾಲಯದ ಸಮೀಪದ ಮನೆಯೊಂದಕ್ಕೆ ನುಗ್ಗಿದ 9 ಮಂದಿಯ ತಂಡದಿಂದ ದರೋಡೆ ನಡೆದಿದೆ ಎನ್ನಲಾಗಿದೆ.
ಮನೆ ಮಾಲಿಕರಾದ ತುಕರಪ್ಪ ಶೆಟ್ಟಿ ಅವರನ್ನು ಕಟ್ಟಿ ಹಾಕಿದ ದರೋಡೆಕೋರರು ದರೋಡೆ ಮಾಡಲು ಯತ್ನಿಸಿದ ವೇಳೆ ಅದನ್ನು ತಡೆಯಲು ಬಂದ ತುಕರಪ್ಪ ಶೆಟ್ಟಿ ಅವರ ಪತ್ನಿ ಗೀತಾ ಅವರ ಮೇಲೆ ಚೂರಿಯಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಈ ದಾಳಿಯ ಪರಿಣಾಮ ಗೀತಾ ಶೆಟ್ಟಿ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.