ಮಂಗಳೂರು, ಜೂ19: ನಗರದ ಹಲವು ಕಡೆಗಳಲ್ಲಿ ತಲೆ ಎತ್ತಿರುವ ಲೈವ್ಬ್ಯಾಂಡ್, ಲೇಡಿಸ್ ಬಾರ್, ಪಬ್, ಮಸಾಜ್ ಸೆಂಟರ್ಗಳ ಅನುಮತಿ ರದ್ದುಗೊಳಿಸುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಜಂಟಿಯಾಗಿ ಆಗ್ರಹಿಸಿದೆ.
ಜೂ 19 ರ ಮಂಗಳವಾರ ನಗರದ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ವಿಹಿಂಪ ಜಿಲ್ಲಾ ಅಧ್ಯಕ್ಷ ಜಗದೀಶ್ ಶೇಣವ ಮಾತನಾಡಿ, ಜಿಲ್ಲಾ ಆಡಳಿತ ಹಾಗೂ ಪೊಲೀಸ್ ಇಲಾಖೆ, ಮಹಿಳೆಯರ ಮೂಲಕ ಸಪ್ಲಾಯ್ ಮಾಡುವ ಲೇಡಿಸ್ ಬಾರ್ , ಲೈವ್ ಬಾಂಡ್ ನಂತಹ ಬಾರ್ ಗಳಿಗೆ ಅನುಮತಿ ನೀಡಬಾರದು ಮತ್ತು ಈಗಾಗಲೇ ತಲೆ ಎತ್ತಿರುವ, ಸಮಾಜದ ಸ್ವಾಸ್ಥ್ಯ ಕೆಡಿಸುವ ಲೈವ್ಬ್ಯಾಂಡ್, ಲೇಡಿಸ್ ಬಾರ್ ಗೆ ಅನುಮತಿ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಒಂದು ವೇಳೆ ಯಾವುದೇ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗದಿದ್ದರೆ ಮಹಿಳಾ ಸಂಘಟನೆ ಮತ್ತು ಸಂಘ ಸಂಸ್ಥೆಗಳ ಮುಖಾಂತರ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವತೆಗಗಳ ಅವಹೇಳನೆಗೆ ಖಂಡನೆ
ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳು, ದೈವಗಳು, ಮಠಮಂದಿರ, ದೇವಸ್ಥಾನಗಳ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಮತ್ತು ಚಿತ್ರಗಳನ್ನು ಹರಿದು ಬಿಡುತ್ತಿರುವುದು ಖಂಡನೀಯ.ಇದು ಹಿಂದೂ ಸಮಾಜಕ್ಕೆ ನೋವನ್ನುಂಟು ಮಾಡಿದೆ. ಇಂತವರ ವಿರುದ್ದ ಸಂಬಂಧಪಟ್ಟ ಇಲಾಖೆಯು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು
ಪತ್ರಿಕಾಗೋಷ್ಠಿಯಲ್ಲಿ ಬಜರಂಗ ದಳ ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್, ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಹ ಸಂಚಾಲಕ ಪ್ರದೀಪ್ ಪಂಪ್ವೆಲ್, ಉಪಸ್ಥಿತರಿದ್ದರು.