ಉಡುಪಿ, ಡಿ.21 (DaijiworldNews/HR): ಖ್ಯಾತ ಪ್ಲೇಸ್ಮೆಂಟ್ ಸಂಸ್ಥೆ 'ಫೆರ್ನಾಂಡಿಸ್ ಗ್ರೂಪ್'ನ ಹೊಸ ಕಚೇರಿ ಭಾನುವಾರ ಕೆಮ್ಮಣ್ಣುವಿನ ಕ್ಯಾಸ್ಟೆಲಿನೊ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿತು.































ಫೆರ್ನಾಂಡಿಸ್ ಗ್ರೂಪಿನ ಮಾಲೀಕ ವಿಲ್ಸನ್ ಫೆರ್ನಾಂಡಿಸ್ ಅವರ ತಾಯಿ ಸೆಲೀನಾ ಫೆರ್ನಾಂಡಿಸ್ ಕಚೇರಿಯನ್ನು ಉದ್ಘಾಟಿಸಿ, ಮಿಲಾಗ್ರಿಸ್ ಕ್ಯಾಥೆಡ್ರಲ್ನ ಫಾ.ವಲೇರಿಯನ್ ಮೆಂಡೊನ್ಕಾ ಅವರು ಕಚೇರಿ ಆವರಣವನ್ನು ಆಶೀರ್ವದಿಸಿದರು. ಕೆಮ್ಮಣ್ಣು ಚರ್ಚ್ನ ಫಾ. ವಿಕ್ಟರ್ ಡಿಸೋಜ ಪ್ರಾರ್ಥನೆ ನೆರವೇರಿಸಿದರು.
ಫಾ. ವಲೇರಿಯನ್ ಮೆಂಡೊನ್ಕಾ ಮಾತನಾಡಿ, "ಫೆರ್ನಾಂಡಿಸ್ ಗ್ರೂಪ್ ತನ್ನ ಕಚೇರಿಗಳನ್ನು ಮಂಗಳೂರು, ಗೋವಾ, ಮುಂಬೈನಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹೊಂದಿದೆ. ಕಂಪನಿಯು ವಿದೇಶದಲ್ಲಿ ಹಲವಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಕೊರೊನಾ ಸಮಯದಲ್ಲಿ ಹೊಸ ಶಾಖೆಯನ್ನು ತೆರೆಯುವುದು ಭರವಸೆಯ ಕಿರಣವಾಗಿದೆ ಎಂದು ಶುಭ ಹಾರೈಸಿದ್ದಾರೆ.
ಫಾ.ವಿಕ್ಟರ್ ಡಿ ಸೋಜಾ ಮಾತನಾಡಿ, "ಇಂದು ಕೆಮ್ಮಣ್ಣು ಜನರಿಗೆ ಅತ್ಯಂತ ಸಂತೋಷದಾಯಕ ದಿನವಾಗಿದೆ. ಫೆರ್ನಾಂಡಿಸ್ ಗ್ರೂಪ್ ಅನೇಕ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ. ಈ ಗುಂಪು ಅಗತ್ಯವಿರುವ ಇನ್ನೂ ಅನೇಕ ಜನರಿಗೆ ಸೇವೆ ಸಲ್ಲಿಸಲಿ" ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಫಾ.ಆಲ್ಬನ್ ಡಿಸೋಜಾ, "ನಾನು ವಿಲ್ಸನ್ ಫೆರ್ನಾಂಡಿಸ್ ಅವರನ್ನು 15 ವರ್ಷಗಳಿಂದಲೂ ತಿಳಿದಿದ್ದೇನೆ. ಅವರ ಇತರ ಸಂಬಂಧಿತ ಸಂಸ್ಥೆಗಳಿಗೆ ನನ್ನ ಆಶೀರ್ವಾದವನ್ನು ಅರ್ಪಿಸುತ್ತೇನೆ. ಫೆರ್ನಾಂಡಿಸ್ ಗ್ರೂಪ್ 25 ದೇಶಗಳಲ್ಲಿ ಉದ್ಯೋಗ ಸೇವೆಗಳನ್ನು ಒದಗಿಸಿದೆ. ಇನ್ನು ಮುಂದೆಯೂ ಅಂತೆಯೇ ಸೇವೆಯನ್ನು ಮುಂದುವರಿಸಿ ಜನರ ಜೀವನದಲ್ಲಿ ಸಂತೋಷವನ್ನು ತರುವಂತಾಗಲಿ" ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕ್ರೆಡೈ ಉಡುಪಿ ಅಧ್ಯಕ್ಷ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ http://www.kallianpur-Kemmannuproperties.com ಎಂಬ ಹೊಸ ವೆಬ್ಸೈಟ್ ಅನ್ನು ಪ್ರಾರಂಭಿಸಿ ಬಳಿಕ ಮಾತನಾಡಿದ ಅವರು," ವಿಲ್ಸನ್ ಅವರು ಬದ್ಧ ಉದ್ಯಮಿ ಮತ್ತು ಜನರು ಅವರ ಪ್ರಾಮಾಣಿಕತೆಯ ಬಗ್ಗೆ ಸಾಕಷ್ಟು ನಂಬಿಕೆಯನ್ನು ಹೊಂದಿದ್ದಾರೆ. ನಾನು ಅವರನ್ನು 15 ವರ್ಷಗಳಿಂದ ತಿಳಿದಿದ್ದೇನೆ" ಎಂದರು.
ಗೌರವಾನ್ವಿತ ಅತಿಥಿ ಮೂಡುಬಿದ್ರೆ ಪುರಸಭೆಯ ಅಧ್ಯಕ್ಷ ಕೆ.ಪಿ.ಜಗದೀಶ್ ಮಾತನಾಡಿ, "ಕೆಮ್ಮಣ್ಣುವಿನಲ್ಲಿ ಹೊಸ ಉದ್ಯಮವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ" ಎಂದು ಹೇಳಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಡುಪಿಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ , ರಾನ್ ರೊಡ್ರಿಗಸ್, ಜನಾರ್ಧನ್ ಥೋನ್ಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.