ಉಜಿರೆ, ಜೂ 19: ರಾಜ್ಯ ರಾಜಕಾರಣದಿಂದ ಬಸವಳಿದಂತೆ ಕಾಣುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 12 ದಿನಗಳ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳ ಶಾಂತಿವನದಲ್ಲಿನ ಎಸ್ಡಿಎಂ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿದ್ದು, ಅವರಿಗೆ ಯೋಗಾಭ್ಯಾಸ, ಮಸಾಜ್, ಹಬೆಸ್ನಾನ ಆರಂಭವಾಗಿದೆ.
ಎಣ್ಣೆಮರ್ದನ, ಪೃಥ್ವಿ (ಮಡ್) ಚಿಕಿತ್ಸೆ, ಹಬೆ ಸ್ನಾನ, ಫಿಸಿಯೋಥೆರಪಿ, ಆ್ಯಂಕ್ಚುಪಂಕ್ಚರ್, ಜಲ ಚಿಕಿತ್ಸೆ, ಆಕಾಶ ಚಿಕಿತ್ಸೆ, ವಾಯು ಚಿಕಿತ್ಸೆ, ಸೂರ್ಯ ಅಗ್ನಿ ಚಿಕಿತ್ಸೆ, ಅಯಸ್ಕಾಂತ ಚಿಕಿತ್ಸೆ, ಯೋಗ ಥೆರಪಿ, ಡಯಟ್ ಥೆರಪಿ, ಧ್ಯಾನ ಪ್ರಾಣಾಯಾಮ ಮೊದಲಾದ ಚಿಕಿತ್ಸೆಗಳನ್ನು ಪಡೆಯಲಿರುವ ಅವರು ಈ ಹಿಂದೆಯೂ ಇಲ್ಲಿ ಎರಡು ಬಾರಿ ಪ್ರಕೃತಿ ಚಿಕಿತ್ಸೆ ಮಾಡಿಸಿಕೊಂಡಿದ್ದರು.
ಚುನಾವಣೆ ಮತ್ತು ಚುನಾವಣೆ ನಂತರದ ರಾಜಕೀಯ ಓಡಾಟಗಳಿಂದ ಬಸವಳಿದಿದ್ದ ಸಿದ್ದರಾಮಯ್ಯ ಇದೀಗ ಪ್ರಕೃತಿ ಚಿಕಿತ್ಸೆಯ ಪಡೆದುಕೊಳ್ಳುತ್ತಿದ್ದು, ಇನ್ನು ಕೆಲವು ದಿನಗಳ ದಿನಗಳ ಕಾಲ ಸಿದ್ದರಾಮಯ್ಯ ರಾಜ್ಯರಾಜಕಾರಣದಿಂದ ವಿಯೋಗವಾಗಿದ್ದು ರಿಲಾಕ್ಸ್ ಮೂಡ್ ನಲ್ಲಿದ್ದಾರೆ. ಇನ್ನು ಈ ಸಂದರ್ಭ ಜಿಲ್ಲಾ ಪ್ರವಾಸದಲ್ಲಿರುವ ಸಚಿವ ರೇವಣ್ಣ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ಭೇಟಿಯಾಗಿ ಅವರು ಭೇಟಿ ಮಾಡಿ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.