ಉಳ್ಳಾಲ, ಡಿ.21 (DaijiworldNews/HR): ಚಂಪಾಷಷ್ಠಿ ಅಂಗವಾಗಿ ತಲಪಾಡಿಯ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ವರ್ಕಾಡಿಯ ಶ್ರೀ ಕಾವೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ, ರೋಟರಿ ಕ್ಲಬ್ ದೇರಳಕಟ್ಟೆ ಮತ್ತು ಶ್ರೀ ಕಾವೀಕೃಪಾ ಸಂಕೇತ್ ಮಿತ್ರಮಂಡಳಿ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಔಷಧ ವಿತರಣಾ ಶಿಬಿರ ನಡೆಯಿತು.




ಶಿಬಿರದಲ್ಲಿ ಭಾಗವಹಿಸಿದ 201 ಜನರಿಗೆ ಆಸ್ಪತ್ರೆಯ ತಜ್ಞ ವೈದ್ಯರಿಂದ ಆರೋಗ್ಯ ಸಲಹೆ, ಚಿಕಿತ್ಸೆ, ಔಷಧಿ ಮತ್ತು ಆರೋಗ್ಯ ಕಾರ್ಡುಗಳನ್ನು ಉಚಿತವಾಗಿ ವಿತರಿಸಲಾಯಿತು. ವಿಶೇಷವಾಗಿ, ಹಲವು ವಾತ ಸಂಬಂಧಿ ನೋವುಗಳಿಗೆ ಪರಿಣಾಮಕಾರಿಯಾಗಿರುವ, ಮನೆಯಲ್ಲೇ ಮಾಡಬಹುದಾದ ಪಿಚು ಚಿಕಿತ್ಸೆಯನ್ನು ಸೂಕ್ತ ಮಾಹಿತಿಯೊಂದಿಗೆ ನೀಡಲಾಯಿತು.
ಆಸ್ಪತ್ರೆಯ ಪ್ರಾಧ್ಯಾಪಕ ಡಾ. ಸಂದೀಪ್ ಬೇಕಲ್ ಆರೋಗ್ಯ ಮಾಹಿತಿಯನ್ನು ನೀಡಿದರು.
ದೇವಸ್ಥಾನದ ಆಡಳಿತ ಮಂಡಳಿಯ ದುರ್ಗಾದಾಸ್ ಭಂಡಾರಿ, ಸುಭಾಷ್ ಅಡಪ ಮತ್ತು ಸದಸ್ಯರು, ಮಿತ್ರಮಂಡಳಿಯ ಸೀತಾರಾಮ್ ಬೇರಿಂಜ ಮತ್ತು ಪದಾಧಿಕಾರಿಗಳು ಹಾಗೂ ರೋಟರಿ ಕ್ಲಬ್ ದೇರಳಕಟ್ಟೆಯ ರೋ. ಪಿ.ಡಿ. ಶೆಟ್ಟಿ, ರೋ. ವಿಕ್ರಮ್ ದತ್ತ ಮತ್ತು ಇತರ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.