ಮೂಡುಬಿದಿರೆ,ಡಿ.22 (DaijiworldNews/HR): ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಮೂಡುಬಿದಿರೆ ತಾಲೂಕಿನಾದ್ಯಂತ 20 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದ್ದು 5ರಲ್ಲಿ ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಲಾಗಿದೆ.

ಪಡುಮಾರ್ನಾಡಿನ ಪಂಚಾಯಿತಿ ಕಚೇರಿ, ಪಾಡ್ಯಾರು ಶಾಲೆ, ಮೂಡುಮಾರ್ನಾಡು ಪ್ರಾಥಮಿಕ ಶಾಲೆ, ಪಾಲಡ್ಕ ವರ್ಣಬೆಟ್ಟು ಪ್ರಾಥಮಿಕ ಶಾಲೆ, ಕೇಮಾರು ಕಿರಿಯ ಪ್ರಾಥಮಿಕ ಶಾಲೆ, ಪಾಲಡ್ಕ ಇಗ್ನೇಶಿಯಸ್ ಆಂಗ್ಲ ಮಾಧ್ಯಮ ಶಾಲೆ, ಕಡಂದಲೆ ಪ್ರಾಥಮಿಕ ಶಾಲೆ, ಮುಕ್ಕಡಪು ಪ್ರಾಥಮಿಕ ಶಾಲೆ, ತೆಂಕಮಿಜಾರಿನ ಮಿಜಾರು ಪ್ರಾಥಮಿಕ ಶಾಲೆ, ಹೊಸಬೆಟ್ಟಿನ ಸೈಂಟ್ ಸೆಬಾಸ್ಟಿಯನ್ ಶಾಲೆ, ಪುಚ್ಚಮೊಗರಿನ ಶಾಂತಿರಾಜ ಕಾಲನಿ, ಹೊಸಬೆಟ್ಟು ಪ್ರಾಥಮಿಕ ಶಾಲೆ, ಇರುವೈಲು ಹಿ.ಪ್ರಾ. ಶಾಲೆ, ವಾಲ್ಪಾಡಿ ಪೆರಿಬೆಟ್ಟು ಶಾಲೆ, ಅಳಿಯೂರು ಮತ್ತು ವಾಲ್ಪಾಡಿ ಪ್ರಾಥಮಿಕ ಶಾಲೆಗಳನ್ನು ಅತೀ ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದೆ.
ಮಿಜಾರು, ವರ್ಣಬೆಟ್ಟು, ಇರುವೈಲು, ಪಂಚಾಯತ್ ಪಡುಮಾರ್ನಾಡು, ಅಳಿಯೂರು ಪ್ರಾಥಮಿಕ ಶಾಲೆಗಳಲ್ಲಿ ನಡೆದ ಮತದಾನವನ್ನು ವೀಡಿಯೋ ಚಿತ್ರೀಕರಣ ಮಾಡಲಾಗುತ್ತದೆ.
ಚುನಾವಣೆಯ ಕಾರ್ಯನಿರ್ವಹಣೆಗಾಗಿ ಮೂಡುಬಿದಿರೆ ತಾಲೂಕಿನ 99 ಮತಗಟ್ಟೆಗಳಲ್ಲಿ 499 ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.