ಮಂಗಳೂರು,ಡಿ.22 (DaijiworldNews/HR): ಇಂದು ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮಂಗಳೂರು ತಾಲೂಕಿನ ಕುತ್ತಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕಿಲ್ಲದೆ ಚುನಾವಣಾ ಸಿಬ್ಬಂದಿ ಪರದಾಡಿದ ಘಟನೆ ನಡೆದಿದೆ.

ಬೆಳಗ್ಗೆ ಸುಮಾರು 4.30 ರಿಂದ ಪವರ್ ಕಟ್ ಆಗಿ ಕ್ಯಾಂಡಲ್ ಮತ್ತು ಮೊಬೈಲ್ ಟಾರ್ಚ್ಗಳ ಮೂಲಕ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ಉಳ್ಳಾಲ ವ್ಯಾಪ್ತಿಯ ಹಲವು ಮತಗಟ್ಟೆಗಳಲ್ಲಿ ಕೂಡ ಕರೆಂಟ್ ಇಲ್ಲದೆ ಚುನಾವಣಾ ಸಿಬ್ಬಂದಿ ಪರದಾಡಿದ ಘಟನೆ ನಡೆದಿದೆ.