ಕಾಸರಗೋಡು, ಡಿ.22 (DaijiworldNews/MB) : ಜಿಲ್ಲೆಯಲ್ಲಿ ಮಂಗಳವಾರ 72 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

68 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 99 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 5698 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 23, 597 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ಪೈಕಿ 1089 ಮಂದಿ ವಿದೇಶದಿಂದ ಹಾಗೂ 857 ಮಂದಿ ಹೊರರಾಜ್ಯಗಳಿಂದ ಬಂದವರು. 21, 651 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.
22439 ಮಂದಿ ಗುಣಮುಖರಾಗಿದ್ದಾರೆ. 246 ಮಂದಿ ಮೃತಪಟ್ಟಿದ್ದಾರೆ.