ಕಾರ್ಕಳ, ಡಿ.22 (DaijiworldNews/MB) : ಬೈಕ್ನಲ್ಲಿ ಬಂದ ಯುವಕನೊಬ್ಬ ರಸ್ತೆ ಬದಿಯಲ್ಲಿ ಮಾತನಾಡುತ್ತಿದ್ದ ಯುವತಿಯೊಬ್ಬಳ ಕತ್ತಿಗೆ ಕೈ ಹಾಕಿ ಚಿನ್ನದ ಚೈನ್ ಎಗರಿಸಲು ವಿಫಲ ಯತ್ನ ಪಳ್ಳಿ ಗ್ರಾಮದಲ್ಲಿ ನಡೆದಿದೆ.

ಪಳ್ಳಿ ಗ್ರಾಮದ ಹೊಸ ಸೇತುವೆ ಬಳಿಯಲ್ಲಿ ಈ ಕೃತ್ಯ ಸೋಮವಾರ ಸಂಜೆ 5.50ರ ವೇಳೆಗೆ ನಡೆದಿದೆ.
ಪರಿಚಯಸ್ಥ ಯುವತಿ ನವ್ಯ ಎಂಬವರೊಂದಿಗೆ ಪಳ್ಳಿ ಗ್ರಾಮದ ಕಲ್ಲಾಪು ಬ್ರಹ್ಮ ದೇವಸ್ಥಾನದ ಸಂಈಪದ ನಿವಾಸಿ ವಿಜಯಶ್ರೀ ಮಾತನಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಕೆಎ 20 ಇಡ್ಲ್ಯೂ1080 ನೇ ನಂಬರ್ನ ಬೈಕ್ ನಲ್ಲಿ ಬಂದಿದ್ದ ಸುಮಾರು 20ರಿಂದ 25 ವರ್ಷದ ತೆಳು ಶರೀರ ಹೊಂದಿರುವ ಯುವಕ ಅದೇ ಮಾರ್ಗವಾಗಿ ಮುಂದೇ ಹೋಗಿ ಹಿಂತಿರುಗಿ ಬಂದು ಏಕಾಏಕಿಯಾಗಿ ವಿಜಯಶ್ರೀ ಅವರ ಕತ್ತಿಗೆ ಕೈ ಹಾಕಿ ಚಿನ್ನದ ಚೈನ್ ಕಳವಿಗೆ ಪ್ರಯತ್ನಿಸಿದ್ದಾರೆ.