ಉಡುಪಿ, ಡಿ.23 (DaijiworldNews/MB) : ಯುಕೆಯಿಂದ ಉಡುಪಿಗೆ ಬಂದ 8 ಮಂದಿಯ ಕೊರೊನಾ ವರದಿ ನೆಗೆಟಿವ್ ಆಗಿದೆ ಎಂದು ತಿಳಿದು ಬಂದಿದೆ.

ಇಂಗ್ಲೆಂಡ್ನಲ್ಲಿ ಹೊಸ ಪ್ರಬೇಧದ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚಿದೆ. ನಗರಕ್ಕೆ ಎಂಟು ಮಂದಿ ಯುಕೆಯಿಂದ ಬಂದಿರುವ ಹಿನ್ನೆಲೆ ಭೀತಿ ಮತ್ತಷ್ಟು ಹೆಚ್ಚಿದೆ.
ಇನ್ನು ಈ ಎಂಟು ಮಂದಿಯ ಕೊರೊನಾ ವರದಿ ನೆಗೆಟಿವ್ ಆಗಿದ್ದು ಸುರಕ್ಷತಾ ಕ್ತಮವಾಗಿ ಮುಂದಿನ 14 ದಿನ ಕಾಲ ಈ ಎಂಟು ಮಂದಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ.
ಸರ್ಕಾರ ನವೆಂಬರ್ 25 ರ ನಂತರ ಕರ್ನಾಟಕಕ್ಕೆ ಇಂಗ್ಲೆಂಡ್ನಿಂದ ಆಗಮಿಸಿದ ಪ್ರಯಾಣಿಕರ ಮಾಹಿತಿಯನ್ನು ರಾಜ್ಯ ಸರ್ಕಾರ ಕಲೆ ಹಾಕಿದ್ದು ಮಂಗಳೂರು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಆಗಮಿಸಿದ ಪ್ರಯಾಣಿಕರ ಮಾಹಿತಿ ಸಂಗ್ರಹಿಸಿದೆ. ಕಳೆದ 1 ವಾರದ ಒಳಗೆ ಯು.ಕೆ. ಯಿಂದ ಉಡುಪಿಗೆ ಎಂಟು ಮಂದಿ ಆಗಮಿಸಿದ್ದರು ಎಂದು ಈ ಮೂಲಕ ತಿಳಿದು ಬಂದಿದೆ.