ಮಂಗಳೂರು, ಡಿ.23 (DaijiworldNews/MB) : ವಿಶ್ವಹಿಂದೂ ಪರಿಷತ್ ಬಜರಂಗದಳ ಮಂಗಳೂರು ಇದರ ವತಿಯಿಂದ ಬಸವರಾಜ ಬೊಮ್ಮಾಯಿ ಮಾನ್ಯ ಗೃಹ ಸಚಿವರು ಕರ್ನಾಟಕ ಸರಕಾರ ಇವರಿಗೆ ಮಾನ್ಯ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ ಜಿಲ್ಲೆ ಇವರ ಮುಖಾಂತರ ಮಂಗಳೂರು ಉಗ್ರರ ಪರ ಗೋಡೆಬರಹ ಪ್ರಕರಣವನ್ನು ಎನ್ ಐ. ಎ ತನಿಖೆಗೆ ನೀಡಲು ಆದೇಶ ಮಾಡುವುದರ ಜೊತೆಗೆ ಮಂಗಳೂರಿನಲ್ಲಿ ಶಾಶ್ವತವಾಗಿ ಎನ್. ಐ.ಎ ಕಛೇರಿಯನ್ನು ಸ್ಥಾಪಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಮಾಡಲಾಯಿತು.



ಜಾಗತಿಕ ಮಟ್ಟದಲ್ಲಿ ಬೇರೂರಿರುವ ಭಯೋತ್ಪಾದನೆ ಚಟುವಟಿಕಯು ಕರಾವಳಿ ಜಿಲ್ಲೆಗಳಲ್ಲಿ ನೆಲೆಕಾಣಲು ಪ್ರಯತ್ನಿಸುತ್ತಿರುವುದು ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹಗಳ ಮುಖಾಂತರ ಕಂಡುಬರುತ್ತಿದೆ. ಇದೊಂದು ಆತಂಕಾರಿ ಫಟನೆಯಾಗಿದ್ದು ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಈ ಪ್ರಕರಣಕ್ಕೆ ಸಂಭಂದಿಸಿದಂತೆ ಈಗಾಗಲೇ 3 ಜನರನ್ನು ತೀರ್ಥಹಳ್ಳಿ ನಿವಾಸಿ ಸಾದತ್, ಮೊಹಮ್ಮದ್ ಶಾರೀಕ್, ಮುನೀರ್ ಅಹಮದ್ ರನ್ನು ಬಂಧಿಸಿದ್ದು, ಅವರಿಂದ ಜಾಗತಿಕ ಭಯೋತ್ಪಾದಕ ಜಮೈಕಾ ಮಲದ ಶೇಕ್ ಅಬ್ದುಲ್ಲಾ ಫೈಝಲ್ ಪ್ರಚೋದನಕಾರಿ ಭಾಷಣ ಮತ್ತು ಉಗ್ರರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಸಿಕ್ಕಿರುವುದು ಭಯೋತ್ಪಾದನ ಚಟುಚಟಿಕೆ ದಕ್ಷಿಣ ಕನ್ನಡದಲ್ಲಿ ನೆಲೆವೂರಲು ಪ್ರಯತ್ನಿಸಿರುವುದಕ್ಕೆ ಸಾಕ್ಷಿಯಾಗಿದೆ.
ಉಗ್ರರ ಪರ ಗೋಡೆ ಬರಹದಲ್ಲಿ ''ನಮ್ಮನ್ನು ವಿದ್ವಂಸಕ ಕೃತ್ಯ ನಡೆಸಲು ಉತ್ತೇಜಿಸಲು ಬರಬೇಡಿ ಲಷ್ಕರ್ ಈ ತೂಯಿಬಾ ಮತ್ತು ತಾಲಿಬಾನ್ಗಳಿಗೆ ಸಂಘಿಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವುದು ತಿಳಿದಿದೆ. ಲಷ್ಕರ್ ಝಿಂದಾಬಾದ್" ಎಂದು ಬರೆಯಲಾಗಿತ್ತು. ಇನ್ನೊಂದು ಗೋಡೆ ಬರಹದಲ್ಲಿ ಪ್ರವಾದಿ ಮೊಹಮ್ಮದ್ದರಿಗೆ ವಿರೋಧಿಸಿದರೆ ನಮ್ಮ ತಲೆಯನ್ನು ಕಡಿಯಲಾಗುವುದು ಎಂದು ಬರೆಯಲಾಗಿತ್ತು. ಇದೊಂದು ಪ್ರಚೋಧನಕಾರಿ ಬರಹವಾಗಿದ್ದು ಜಿಲ್ಲೆಯಲ್ಲಿ ಜಿಹಾದಿ ಮಾನಸಿಕತೆ ಇರುವ ಯುವಕರನ್ನು ಭಯೋತ್ಪಾದನ ಕೃತ್ಯಕ್ಕೆ ಬಳಸಲು ಪ್ರೇರೇಪಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಆದುದರಿಂದ ಈ ಪ್ರಕರಣವನ್ನು ತಾವು ಗಂಭೀರವಾಗಿ ಪರಿಗಣಿಸಿ ಎನ್. ಐ.ಎ. ತನಿಖೆಗೆ ನೀಡಲು ಆದೇಶ ಮಾಡುವುದರ ಜೊತೆಗೆ ಮಂಗಳೂರಿನಲ್ಲಿ ಶಾಶ್ವತವಾಗಿ ಎನ್. ಐ.ಎ ಕಛೇರಿಯನ್ನು ಸ್ಥಾಪಿಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಕರಾವಳಿ ಜಿಲ್ಲೆಯ ಜನತೆಯ ಪರವಾಗಿ ಮನವಿ ಸಲ್ಲಿಸಲಾಯಿತು.