ಉಡುಪಿ, ಡಿ.23 (DaijiworldNews/MB) : ಅಂಬಾಗಿಲು - ಕಲ್ಸಂಕ ರಸ್ತೆ ಉಡುಪಿ ನಗರಕ್ಕೆ ಪ್ರವೇಶ ಮಾಡಲು ಇರುವ ಮುಖ್ಯ ದಾರಿ. ಆದರೆ ಇಲ್ಲಿ ದ್ವಿಚಕ್ರ - ವಾಹನ ಚಾಲಕರು ಬರುವುದು ತುಂಬಾ ಅಪಾಯಕಾರಿಯಾಗಿದೆ. ಮೊದಲೇ ರಸ್ತೆಯಲ್ಲಿ ಚರಂಡಿಯ ಪಿಟ್ಗಳು ಆಳವಾಗಿದ್ದು ರಭಸದಿಂದ ಬರುವ ವಾಹನಗಳಿಗೆ ಇದರ ಅರಿವಿಲ್ಲದೆ ಸ್ಕಿಡ್ ಆಗುವ ಸಂಭವವಿದೆ. ಕೆಲವೊಮ್ಮೆ ಇಲ್ಲಿ ನಡೆಯುವ ಕಾಮಗಾರಿಗಳೇ ಹಾಗೆ, ಒಂದು ಕಡೆ ರಸ್ತೆ ಮಾಡಿಕೊಂಡು ಬರುತ್ತಿದ್ದರೆ, ಇನ್ನೊಂದು ಕಡೆಯಿಂದ ಅಗೆದುಕೊಂಡು ಬರುತ್ತಾರೆ. ಅದೇ ರೀತಿಯಾಗಿದೆ ಈ ರಸ್ತೆಯ ಸ್ಥಿತಿಯಾಗಿದೆ.






ಅವೈಜ್ಞಾನಿಕ ಚರಂಡಿ ಪಿಟ್ನ್ನು ಕಾಮಗಾರಿ ನಡೆಸಿದ್ದು, ಅಲ್ಲಲ್ಲಿ ಆಳ ಹೊಂಡಗಳು ಬಿದ್ದಿವೆ. ರಸ್ತೆಯನ್ನು ಈಗ ರಸ್ತೆ ಪ್ಯಾಚ್ ವರ್ಕ್ ಮಾಡಲು ಡಾಂಬಾರು ಸಹಿತ ಜಲ್ಲಿಯನ್ನು ಕಿತ್ತುಹಾಕಲಾಗಿದೆ. ಅಂಬಾಗಿಲು - ಕಲ್ಸಂಕ ರಸ್ತೆ, ಅಂದರೆ ಕಲ್ಕೂರ ರೆಫ್ರಿಜರೇಟರ್ಸ್ ಇದರ ಮುಂಭಾಗ ರಸ್ತೆ ಹಾಳಾಗಿದೆ. ಇದರಿಂದ ದ್ವಿಚಕ್ರ ವಾಹನ ಚಾಲಕರು ಸ್ಕಿಡ್ ಆಗುತ್ತಾರೆ.
ರಸ್ತೆ ರಿಪೇರಿ ಕೆಲಸ ಮಾಡಬೇಕೆಂದು ಅಗೆದ ರಸ್ತೆ ಒಂದು ವಾರದಿಂದ ಹಾಗೆಯೇ ಇಡಲಾಗಿದ್ದು ಜನರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಜಲ್ಲಿ ಕಲ್ಲು ಹುಡಿ ಮಿಶ್ರಣ ಹಾಕಿದನ್ನು ಹಾಗೆಯೇ ಬಿಟ್ಟಿದ್ದು ಜಲ್ಲಿ ಧೂಳು ಹಾರುತ್ತಿದೆ. ಇನ್ನು ಆ ದಾರಿಯಲ್ಲಿ ಬರುವ ಹೊಸ ಕಾರು ಚಾಲಕರಿಗೆ ಇಂತಹ ಅಪೂರ್ಣ ರಸ್ತೆಗಳು ಜೀವಕ್ಕೆ ಕುತ್ತು ತರಬಹುದು. ದೊಡ್ಡ ದೊಡ್ಡ ಜಲ್ಲಿ ಕಲ್ಲುಗಳು ವಾಹನದ ಚಕ್ರಕ್ಕೆ ಸಿಕ್ಕಿ ಸ್ಕಿಡ್ ಆಗುವ ಸಂಭಾವ್ಯತೆ ಅಧಿಕವಾಗಿದೆ. ಹಾಗಾಗಿ ಕೂಡಲೇ ನಗರ ಸಭೆಯವರು ಅಥವಾ ಸಂಬಂಧಪಟ್ಟ ಇಲಾಖೆಯವರು ತುರ್ತಾಗಿ ಈ ಕೆಲಸವನ್ನು ಪೂರ್ಣ ಮಾಡಬೇಕೆಂಬುದು ಸ್ಥಳೀಯರ, ವಾಹನ ಚಾಲಕರ ಒತ್ತಾಯವಾಗಿದೆ.