ವೇಣೂರು, ಸೆ 26: ದೇವಸ್ಥಾನಕ್ಕೆಂದು ಹೊರಟ ದಂಪತಿಗಳನ್ನು ತಡೆದು ಮಕ್ಕಳಾಗುವ ಕಷಾಯ ನೀಡುವುದಾಗಿ ನಂಬಿಸಿ ಪ್ರಜ್ಞೆ ತಪ್ಪಿಸಿ ನಗದು ದೋಚಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸೆ 16 ರಂದು ಬಳಂಜದ ಪುರುಷೋತ್ತಮ ಅವರು ದೇವಸ್ಥಾನಕ್ಕೆ ತೆರಳಲೆಂದು ತೆಂಕ ಕಾರಂದುರು ಬಳಿಯ ಕಾಪಿನಡ್ಕದಲ್ಲಿ ನಿಂತಿದ್ದರು. ಈ ವೇಳೆ ಸ್ಥಳದಲ್ಲಿ ಕಾರಿನಲ್ಲಿದ್ದ ಅಪರಿಚಿತರು ಇವರ ಪೂರ್ವಾಪರ ವಿಚಾರಿಸಿ ಅವರಿಗೆ ಮಕ್ಕಳಾಗದಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಬಳಿಕ ಮಕ್ಕಳಾಗುವುದಕ್ಕೆ ಮದ್ದು ನೀಡುತ್ತೇವೆ ಎಂದು ಪುರುಷೋತ್ತಮ ಅವರನ್ನು ಅವರ ಮನೆಗೆ ಕರೆದೊಯ್ದಿದ್ದರು. ಮನೆಯವರಲ್ಲಿ ಜೀರಿಗೆ ಹುಡಿ ಕೇಳಿ ಅದನ್ನು ಯಾವುದೋ ದ್ರಾವಣಕ್ಕೆ ಸುರಿದು ದಂಪತಿಗೆ ಈ ಅಪರಿಚಿತರು ನೀಡಿದ್ದರು ಎನ್ನಲಾಗಿದೆ.
ಖದೀಮರು ನೀಡಿದ್ದ ದ್ರಾವಣ ಕುಡಿದ ಪರುಷೋತ್ತಮ ಹಾಗೂ ಅವರ ಪತ್ನಿ ಪ್ರಜ್ಞೆ ಕಳೆದುಕೊಂಡಿದ್ದರು. ಇವರಿಗೆ ಮತ್ತೆ ಪ್ರಜ್ಞೆ ಬಂದಾಗ ದುಷ್ಕರ್ಮಿಗಳು ಪರಾರಿಯಾಗಿದ್ದು ಅವರು ಮನೆಯ ಕಪಾಟಿನಲ್ಲಿದ್ದ 40 ಸಾವಿರ ಹಣವನ್ನು ಕದ್ದೊಯ್ದಿರುವುದು ಬೆಳಕಿದೆ ಬಂದಿದೆ. ಆಗಂತುಕರ ಮಾತು ಕೇಳಿ ವಂಚನೆಗೊಳಗಾದ ಈ ಬಗ್ಗೆ ಪುರುಷೋತ್ತಮ ಆಚಾರಿ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.