ಮಂಗಳೂರು, ಡಿ.24 (DaijiworldNews/HR): ಡಿಸೆಂಬರ್ 24 ರಿಂದ ಜನವರಿ 2 ರವರೆಗೆ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ವಿಧಿಸಲಾಗುವ ರಾತ್ರಿ ಕರ್ಫ್ಯೂಗೆ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ಸಂಪೂರ್ಣವಾಗಿ ಕುಸಿದ ವ್ಯಾಪಾರವು ಕಳೆದ ಎರಡು-ಮೂರು ತಿಂಗಳುಗಳಲ್ಲಿ ಸ್ವಲ್ಪ ಪ್ರಗತಿ ಕಂಡಿದೆ. ಕ್ರಿಸ್ಮಸ್ ಹಬ್ಬದ ಕಾರಣ ಮಾರುಕಟ್ಟೆಯಲ್ಲಿ ವ್ಯಾಪಾರ ಹೆಚ್ಚಾಗಿದ್ದು, ಇದೀಗ ರಾತ್ರಿ ಕರ್ಫ್ಯೂನಿಂದಾಗಿ ಮತ್ತೆ ವ್ಯಾಪಾರದ ಮೇಲೆ ಪರಿಣಾಮ ಬೀರಬಹುದು ಎಂದು ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 23 ರಂದು ಸರ್ಕಾರ ಒಂಬತ್ತು ದಿನಗಳ ರಾತ್ರಿ ಕರ್ಫ್ಯೂ ಘೋಷಿಸಿದಂತೆ, ಸಾರ್ವಜನಿಕರು, ವ್ಯಾಪಾರಿಗಳು ಮತ್ತು ಪ್ರಯಾಣಿಕರು ಸರ್ಕಾರದ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಅನೇಕ ಆಚರಣೆಗಳು ನಿಗದಿಯಾಗಿದ್ದು, ಇದರಲ್ಲಿ ಹಲವು ಕಾರ್ಯಕ್ರಮಗಳು ರಾತ್ರಿಯಿಡೀ ನಡೆಯುವಂತಹದು, ಆದರೆ ರಾತ್ರಿ ಕರ್ಫ್ಯೂನಿಂದಾಗಿ ಈ ಆಚರಣೆಗಳಿಗೆ ಅಡ್ಡಿಉಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.