ಮಂಗಳೂರು, ಜೂ 20: ಓವರ್ ಸ್ಪೀಡ್ ನಿಂದಾಗಿ ಖಾಸಗಿ ಬಸ್ಸೊಂದು ಮೂರು ದ್ವಿಚಕ್ರ ವಾಹನಗಳಿಗೆ ಢಿಕ್ಕಿಯಾಗಿ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಘಟನೆ ಜೂ 20 ರ ಬುಧವಾರ ಮಧ್ಯಾಹ್ನ ನಗರದ ಎಕ್ಕೂರು ಬಳಿ ನಡೆದಿದೆ.
ಮಂಗಳೂರಿನಿಂದ ಬಿ.ಸಿ ರೋಡ್ ಗೆ ಚಲಿಸುತ್ತಿದ್ದ ಬಸ್ಸು, ಎಕ್ಕೂರು ಜಂಕ್ಷನ್ ಬಳಿ ಅತಿವೇಗದಿಂದ ಚಲಿಸುತ್ತಿದ್ದು, ನಿಯಂತ್ರಣ ತಪ್ಪಿದ್ದ ಬಸ್ಸು ಮೂರು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಒಬ್ಬನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಇನ್ನೊಬ್ಬ ಸವಾರನಿಗೂ ಗಾಯಗಳಾಗಿವೆ. ಈ ಅಪಘಾತದಿಂದ ಪಾದಚಾರಿ ಮಹಿಳೆಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆಯ ಬಳಿಕ ಬಸ್ಸಿನ ಚಾಲಕ ಪರಾರಿಯಾಗಿದ್ದು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.