ಪಡುಬಿದ್ರಿ, ಡಿ.24 (DaijiworldNews/HR): ಪಡುಬಿದ್ರಿಯ ಡೌನ್ಟೌನ್ ಲಾಡ್ಜ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸುರೇಶ್ ಶೆಟ್ಟಿ(52) ಎಂಬುವವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸುರೇಶ್ ಶೆಟ್ಟಿ ಅವರ ತಂದೆಯವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದವರನ್ನು ಕಾರ್ಕಳದ ಸಿಟಿ ನಸಿಂಗ್ ಹೋಂಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಕೆಲಸಕ್ಕೆ ಸರಿಯಾಗಿ ಹೋಗದೇ, ಆರ್ಥಿಕ ಅಡಚಣೆ ಉಂಟಾಗಿದ್ದು, ಇದೇ ಕಾರಣದಿಂದ ಮನನೊಂದು ಕಾಪುವಿನ ನಂದಿಕೂರು ಗ್ರಾಮದ ಅಡ್ವೆ ಆನಂದಿ ಲಾಡ್ಜ್ನ ಕೋಣೆಯ ಒಳಗೆ ಬಾಗಿಲಿಗೆ ಚಿಲಕ ಹಾಕಿ, ಕಿಟಕಿಯ ಸರಳಿಗೆ ಬಾತ್ ಟವೆಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.