ಮಂಗಳೂರು, ಡಿ.24 (DaijiworldNews/MB) : ಕ್ರಿಸ್ಮಸ್ನ ಮುಂಚಿನ ದಿನದಂದು ನಗರದ ಸಿಟಿ ಸೆಂಟರ್ ಮಾಲ್ನಲ್ಲಿ ಬೃಹತ್ ಕ್ರಿಸ್ಮಸ್ ಟ್ರೀ ಇಡಲಾಗಿದ್ದು ಸುಂದರವಾದ ಈ ಕ್ರಿಸ್ಮಸ್ ಟ್ರೀ ಎಲ್ಲಾ ಗ್ರಾಹಕರ ಕಣ್ಮನ ಸೆಳೆದಿದೆ.




ಹಬ್ಬದ ಈ ಸಂಭ್ರಮದಲ್ಲಿ ಸಿಟಿ ಸೆಂಟರ್ ಮಾಲ್ನ್ನು ಸಂಪೂರ್ಣವಾಗಿ ಅಲಂಕರಿಸಲ್ಪಟ್ಟಿದ್ದು ನಗರದಲ್ಲಿ ಆಕರ್ಷಣೆಯ ಕೇಂದ್ರವಾಗಿದೆ. ಮಾಲ್ಗೆ ಭೇಟಿ ನೀಡಿದ ಹಲವರು ಕ್ರಿಸ್ಮಸ್ ಟ್ರೀ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಸತ ಪಡುತ್ತಿರುವುದು ಕಂಡು ಬಂದಿದೆ.
ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಪ್ರತಿ ವರ್ಷವೂ ಸಿಟಿ ಸೆಂಟರ್ ಮಾಲ್ನಲ್ಲಿ ಸುಂದರವಾದ ಕ್ರಿಸ್ಮಸ್ ಟ್ರೀ ಇರಿಸಿ ಆಕರ್ಷಕವಾಗಿ ಅಲಂಕಾರ ಮಾಡಲಾಗುತ್ತದೆ ಎಂದು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.