ಕಾಸರಗೋಡು, ಡಿ.24 (DaijiworldNews/MB) : ''ವಿವಾಹ ಸಮಾರಂಭಗಳಿಗೆ ಸ್ಥಳೀಯಾಡಳಿತ ಸಂಸ್ಥೆಗಳಿಂದ ಪೂರ್ವಾನುಮತಿ ಕಡ್ಡಾಯ'' ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ತಿಳಿಸಿದ್ದಾರೆ.

ವೀಡಿಯೋ ಕಾನ್ಫೆರೆನ್ಸ್ ಮೂಲಕ ಗುರುವಾರ ನಡೆದ ಜಿಲ್ಲಾ ಮಟ್ಟದ ಕೊರೊನಾ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರೊನಾದ ಹೊಸ ರೂಪ ಹರಡುತ್ತಿರುವ ಹಿನ್ನಲೆಯಲ್ಲಿ ಬ್ರಿಟನ್, ಇಟಲಿ, ಯುಕೆ ಸೇರಿದಂತೆ ಯೂರೋಪ್ಯನ್ ರಾಷ್ಟ್ರ ಗಳಿಂದ ಬಂದವರು ರೂಂ ಕ್ವಾರೆಂಟೈನ್ ಒಳಗಾಗಬೇಕು. ರೋಗಲಕ್ಷಣ ಹೊಂದಿರುವವರು ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಭೇಟಿ ಮಾಡಬೇಕು. ವಿದೇಶಗಳಿಂದ ಮರಳುವವರು ಪೊಲೀಸ್, ಜಿಲ್ಲಾ ವೈದ್ಯಾಧಿಕಾರಿ ಗಳಿಗೆ ವಾಟ್ಸ್ಆಪ್ ಮೂಲಕ ಮಾಹಿತಿ ನೀಡಬೇಕು.
ಮಂಗಳೂರು ವಿಮಾನ ನಿಲ್ದಾಣ ಮೂಲಕ ಊರಿಗೆ ಮರಳುವವರ ಮಾಹಿತಿ ಒದಗಿಸುವಂತೆ ದಕ್ಷಿಣ ಕನ್ನಡ ಡೆಪ್ಯೂಟಿ ಕಮೀಷನರ್ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಹೈಯರ್ ಸೆಕೆಂಡರಿ, ಪ್ರೌಢಶಾಲೆ ಶಿಕ್ಷಕರಿಗೆ ಶಾಲಾರಂಭ ಸಂಬಂಧ ಹೊಣೆಗಾರಿಕೆ ಇರುವ ಹಿನ್ನೆಲೆಯಲ್ಲಿ ಡಿ.ಡಿ.ಇ. ಅವರ ಮನವಿ ಹಿನ್ನೆಲೆಯಲ್ಲಿ ಇಂಥಾ ಶಿಕ್ಷಕರನ್ನು ಮಾಸ್ಟರ್ ಯೋಜನೆಯಿಂದ ಕೈಬಿಡಲಾಗಿದೆ.
ಕುಂಬಳೆ ಜಾತ್ರೆ, ಬೆಡಿಗೆ ಅನುಮತಿಯಿಲ್ಲ
ಕುಂಬಳೆ ಕಣಿಪುರ ಕ್ಷೇತ್ರದ ಜಾತ್ರೆ, ಬೆಡಿ ಉತ್ಸವಗಳಿಗೆ ಅನುಮತಿ ನೀಡದಿರಲು ಸಲಹಾ ಸಮಿತಿ ತೀರ್ಮಾನಿಸಿದೆ. ಧಾರ್ಮಿಕ ಅನುಷ್ಠಾನ ಇತ್ಯಾದಿಗಳನ್ನು ಕೋವಿಡ್ ಸಂಹಿತೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿಕೊಂಡು, ಅನಿವಾರ್ಯ ಮಂದಿ ಮಾತ್ರ ಭಾಗವಹಿಸಿ ನಡೆಸಬಹುದು ಎಂದು ತಿಳಿಸಲಾಗಿದೆ.
ಜಿಲ್ಲೆಯ ಪೆಟ್ರೋಲ್ ಬಂಕ್ಗಳು ರಾತ್ರಿ 9 ಗಂಟೆ ವರೆಗೆ ಮಾತ್ರ ಕಾರ್ಯಾಚರಿಸಬಹುದು. ಬೇಕಲ ಕೋಟೆಯ ಲೈಡ್ ಆಂಡ್ ಸೌಂಡ್ ಶೋ ದಿನ ಮಾತ್ರ 100 ಮಂದಿಗೆ ಪ್ರವೇಶಕ್ಕೆ ಅವಕಾಶನೀಡಲಾಗುವುದು
ಎಲ್ಲಾ ಸರಕಾರಿ ಸಿಬ್ಬಂದಿಗೆ 14 ದಿನಗಳಿಗೊಮ್ಮೆ ಆಂಟಿಜೆನ್ ಟೆಸ್ಟ್ ಕಡ್ಡಾಯ
ಎಲ್ಲ ಸರಕಾರಿ ಸಿಬ್ಬಂದಿಗೆ 14 ದಿನಗಳಿಗೊಮ್ಮೆ ಆಂಟಿಜೆನ್ ಟೆಸ್ಟ್ ಕಡ್ಡಾಯ, ಎಲ್ಲ ಜಿಲ್ಲಾ ಮುಖ್ಯಸ್ಥರೂ ಈ ಸಂಬಮದ ಆದೇಶವನ್ನುಕಡ್ಡಾಯವಾಗಿ ಪಾಲಿಸುವ ಸಂಬಮದ ಜಿಲ್ಲಾ ವೈದ್ಯಾಧಿಕಾರಿ ಖಚಿತತೆ ಮುಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಹೆಚ್ಚವರಿ ದಂಡನಾಧಿಕಾರತಿ ಎನ್.ದೇವಿದಾಸ್, ಉಪಜಹಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಷಂಸುದ್ದೀನ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.