ಮಂಗಳೂರು, ಡಿ.22 (DaijiworldNews/MB) : 7 ವರ್ಷದ ಮಗು ಕಾರಿನ ಒಳಗೆ ಇರುವಾಗಲೇ ಟ್ರಾಫಿಕ್ ಪೊಲೀಸರು ಕಾರನ್ನು ಎಳೆದೊಯ್ದಿರುವ ವಿಚಿತ್ರ ಘಟನೆ ಡಿಸೆಂಬರ್ 24 ರ ಗುರುವಾರ ಮಂಗಳೂರು ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಾಹನದ ಮಾಲೀಕರು ಮಿಜಾರಿನ ನಿವಾಸಿ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ, ಈ ವಿಷಯವನ್ನು ಸ್ಪಷ್ಟಪಡಿಸಿದ ಟ್ರಾಫಿಕ್ ಅಧಿಕಾರಿಗಳು, ಕಾರಿನ ಬಾಗಿಲು ಟಿನ್ಟೆಡ್ ಕಿಟಕಿ ಹೊಂದಿದ್ದ ಕಾರಣ ವಾಹನದೊಳಗೆ ಪ್ರಯಾಣಿಕರು ಇರುವುದು ಕಂಡು ಬಂದಿಲ್ಲ. ಕದ್ರಿಯ ಗಿರಿಯಾಸ್ನ ಫುಟ್ಪಾತ್ ಒಳಭಾಗದಲ್ಲಿ ನಿಲ್ಲಿಸಲಾಗಿದ್ದ ಕಾರಣ ಸ್ವಿಫ್ಟ್ ಡಿಜೈರ್ ಕಾರನ್ನು ಎಳೆದೊಯ್ಯಲಾಯಿತು ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಈ ವಿಚಾರದ ಬಗ್ಗೆ ಮಾತುಕತೆ ನಡೆಸಿ ಪರಿಹರಿಸಲಾಗಿದೆ ಎಂದು ವರದಿಯಾಗಿದೆ.