ಕಾಸರಗೋಡು, ಡಿ.25 (DaijiworldNews/PY): ಜಿಲ್ಲೆಯಲ್ಲಿ ಶುಕ್ರವಾರ 56 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಇಂದು ಕೊರೊನಾ ದೃಢಪಟ್ಟ 56 ಮಂದಿ ಪೈಕಿ 53 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದ್ದು, ಉಳಿದ ಮೂವರ ಪೈಕಿ ಇಬ್ಬರು ಕರ್ನಾಟಕ ಹಾಗೂ ಓರ್ವ ದುಬೈಯಿಂದ ಬಂದವರಾಗಿದ್ದಾರೆ.
ಇಂದು 49 ಮಂದಿ ಗುಣಮುಖರಾಗಿದ್ದು, ಸದ್ಯ 931 ಮಂದಿ ಚಿಕಿತ್ಸೆಯಲ್ಲಿದ್ದಾರೆ.