ಕಾಸರಗೋಡು, ಡಿ.25 (DaijiworldNews/HR): ಡಿವೈಎಫ್ಐ ಕಾರ್ಯಕರ್ತ ಅಬ್ದುಲ್ ಖಾದರ್ (30) ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಯನ್ನು ತನಿಖಾ ತಂಡ ಬಂಧಿಸಿದೆ.

ಬಂಧಿತನನ್ನು ಕಲ್ಲೂರಾವಿ ಮುಂಡತ್ತೋಡ್ನ ಇರ್ಷಾದ್(30) ಎಂದು ಗುರುತಿಸಲಾಗಿದೆ.
ಘರ್ಷಣೆ ಸಂದರ್ಭದಲ್ಲಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಈತನನ್ನು ಇಂದು ಕಾಸರಗೋಡಿಗೆ ಕರೆ ತರಲಾಯಿತು.
ಈ ನಡುವೆ ತನಿಖೆಯನ್ನು ಕ್ರೈಂ ಬ್ರಾಂಚ್ಗೆ ಒಪ್ಪಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಸನ್, ಆಶೀರ್ ಮತ್ತು ಇಷಾಕ್ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.