ಬೈಂದೂರು, ಡಿ.25 (DaijiworldNews/HR): ಗೋ ಕಳ್ಳತನವನ್ನು ಪೊಲೀಸರು ಬೆನ್ನತ್ತಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಚೆಕ್ ಪೋಸ್ಟ್ ಬಳಿ ನಡೆದಿದೆ.



ನಾವುಂದ ಮೂಲದ ಜಲೀಲ್ ಎಂಬವರು ನಾವುಂದದಿಂದ ಭಟ್ಕಳಕ್ಕೆ ಗೋ ಸಾಗಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಪಡೆದ ಪೋಲಿಸರು ಮಿಂಚಿನ ಕಾರ್ಯಚರಣೆ ನಡೆಸಿ ಹನ್ನೆರಡು ಗೋವುಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಇನ್ನು ಪೊಲೀಸರು ಕಾರ್ಯಚರಣೆ ನಡೆಸುವಾಗ ಗೋ ಕಳ್ಳರು ಇನ್ಸೂಲೇಟರ್ ಕಾರನ್ನು ಬಿಟ್ಟು ಪರಾರಿದ್ದಾರೆಂದು ತಿಳಿದು ಬಂದಿದೆ.
ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಹಾಗೂ ಪಿ.ಎಸ್.ಐ ಸಂಗೀತ ನೇತ್ರತ್ವದಲ್ಲಿ ಕಾರ್ಯಚರಣೆ ನಡೆದಿದ್ದು, ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.