ಬಂಟ್ವಾಳ, ಡಿ. 26 (DaijiworldNews/MB) : ಕಲ್ಲಡ್ಕದ ಫ್ಲ್ಯಾಟ್ ಒಂದರ ಲಿಫ್ಟ್ನಲ್ಲಿ ನಾಲ್ಕು ಹುಡುಗಿಯರು ಸುಮಾರು ಎರಡೂವರೆ ಗಂಟೆಗಳ ಕಾಲ ಸಿಕ್ಕಿಹಾಕಿಕೊಂಡ ಹಿನ್ನೆಲೆ ಸ್ಥಳದಲ್ಲಿ ಭಾರೀ ಆತಂಕ ಸೃಷ್ಟಿಯಾದ ಘಟನೆ ಡಿಸೆಂಬರ್ 25 ರ ಶುಕ್ರವಾರ ಸಂಜೆ ನಡೆದಿದೆ.

ಪತ್ರಕರ್ತ ಲತೀಫ್ ಅವರ ಪುತ್ರಿ ಫಿದಾನೈನಾ (15), ಅವರ ಸಂಬಂಧಿ ಇಸ್ಮಾಯಿಲ್ ಅವರ ಪುತ್ರಿ ಮೈಷೀನಾ (14), ರಜಾಕ್ ಅವರ ಪುತ್ರಿ ಸಿಯಾನಾ (13) ಮತ್ತು ಅಹ್ಮದ್ ಅವರ ಪುತ್ರಿ ಅಫ್ರಾ (19) ಲಿಫ್ಟ್ನಲ್ಲಿ ಸಿಲುಕಿದ್ದರು. ಇಲ್ಲಿನ ಕಲ್ಲಡ್ಕದ ಗಂಗಾಧರ್ ವಸತಿ ಕಟ್ಟಡದಲ್ಲಿ ಈ ಘಟನೆ ನಡೆದಿದೆ.
ಲತೀಫ್ ಕಟ್ಟಡದ ನಿವಾಸಿಯಾಗಿದ್ದು ಶುಕ್ರವಾರ ಸಂಜೆ ಅವರ ಸಂಬಂಧಿಕರು ಅವರ ಮನೆಗೆ ಬಂದಿದ್ದರು. ಹುಡುಗಿಯರು ಸಮೀಪದ ಅಂಗಡಿಯೊಂದಕ್ಕೆ ಹೋಗಲು ನಿರ್ಧರಿಸಿದರು ಎಂದು ತಿಳಿದುಬಂದಿದೆ. ಅವರು ಲಿಫ್ಟ್ನಲ್ಲಿ ನೆಲ ಮಹಡಿಗೆ ತೆರಳಿದ ಸಂದರ್ಭ ಲಿಫ್ಟ್ ತಾಂತ್ರಿಕ ಸಮಸ್ಯೆಯಿಂದ ಮಧ್ಯದಲ್ಲಿ ಒಮ್ಮೆಲೇ ಸ್ಥಗಿತಗೊಂಡಿದೆ.
ಘಟನೆ ನಡೆದ ಕೂಡಲೇ ಕಟ್ಟಡದ ನಿವಾಸಿಗಳು ಮತ್ತು ಸ್ಥಳೀಯರು ಸ್ಥಳಕ್ಕೆ ಬಂದು ಬಾಲಕಿಯರನ್ನು ರಕ್ಷಿಸಲು ಪ್ರಯತ್ನಿಸಿದರು. ಅವರು ಕಬ್ಬಿಣದ ರಾಡ್ ಬಳಸಿ ಲಿಫ್ಟ್ ಬಾಗಿಲುಗಳಿಗೆ ಕೊಂಚ ತೆರೆಯುವಲ್ಲಿ ಯಶಸ್ವಿಯಾದರು. ಬಳಿಕ ಹುಡುಗಿಯರಿಗೆ ಉಸಿರುಗಟ್ಟಿಸದಂತೆ ಟೇಬಲ್ ಫ್ಯಾನ್ನ್ನು ಲಿಫ್ಟ್ ಬಳಿ ಇರಿಸಿದರು.
ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಬಂಟ್ವಾಳದ ನಗರ ಎಸ್ಐ ಅವಿನಾಶ್ ಮತ್ತು ಇತರ ಪೊಲೀಸ್ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದ್ದು ಟ್ಟಡದ ನಿವಾಸಿಗಳು ಎಲಿವೇಟರ್ ಕಂಪನಿಗೆ ಮಾಹಿತಿ ನೀಡಿದರು.
ಸ್ಥಳೀಯರು ಕಬ್ಬಿಣದ ಸರಳುಗಳನ್ನು ಬಳಸಿ ಬಾಗಿಲು ತೆರೆಯುವಂತೆ ಒತ್ತಾಯಿಸಿದರು. ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಾಲಕಿಯರನ್ನು ರಕ್ಷಿಸುವ ಹೊತ್ತಿಗೆ ರಾತ್ರಿ 7.30 ಕಳೆದಿದೆ.