ಜೂ 21: ಅತೀ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾವು ಮಗುವೊಂದಿಗಿರುವ ಹಾಗೂ ಪತಿಯೊಂದಿಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ನ್ಯೂಜಿಲ್ಯಾಂಡ್ನ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ ಅಕ್ಲಂಡ್ ನಲ್ಲಿ ಇವರ ಹೆರಿಗೆಯಾಗಿರುವುದು ಇನ್ನೊಂದು ವಿಶೇಷ . ಅಧಿಕಾರದಲ್ಲಿರುವಾಗಲೇ ಮಗುವಿಗೆ ತಾಯಿಯಾದ ವಿಶ್ವದ ಎರಡನೇ ಪ್ರಧಾನಿ ಎಂಬ ಕೀರ್ತಿಗೆ ಜಸಿಂದಾ ಅರ್ಡೆರ್ನ್ ಪಾತ್ರರಾಗಿದ್ದಾರೆ.
37ವರ್ಷದ ಜಸಿಂದಾ ಅವರ ಪತಿ ಟಿ.ವಿ ನಿರೂಪಕರಾಗಿದ್ದು, ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಪ್ರಧಾನಿಯಾಗಿ ಜಸಿಂದಾ ಆಯ್ಕೆಯಾಗಿದ್ದರು. ನ್ಯೂಜಿಲೆಂಡ್ ನ ಅತೀ ಕಿರಿಯ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾದ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ಮೂಲಕ ಅಧಿಕಾರವಧಿಯಲ್ಲಿ ತಾಯಿಯಾದ ನ್ಯೂಜಿಲ್ಯಾಂಡ್ ನ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸದ್ಯ ಇವರು ಒಂದುವರೆ ತಿಂಗಳ ಕಾಲ ಹೆರಿಗೆ ರಜೆಯಲ್ಲಿದ್ದು, ಇವರ ಅನುಪಸ್ಥಿತಿಯಲ್ಲಿ ಪ್ರಧಾನಿ ಕೆಲಸವನ್ನು ಉಪ ಪ್ರಧಾನಿ ವಿನ್ಸ್ಟನ್ ಪೀಠರ್ ನಿರ್ವಹಿಸುತ್ತಿದ್ದಾರೆ. ನ್ಯೂಜಿಲ್ಯಾಂಡ್ನ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ ಅಕ್ಲಂಡ್ ನಲ್ಲಿ ಹೆರಿಗೆಯಾಗಿದ್ದು, ಈ ಹಿಂದೆ ಪಾಕ್ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ 1990ರಲ್ಲಿ ತಮ್ಮ ಅಧಿಕಾವಧಿಯಲ್ಲಿ ತಾಯಿಯಾಗಿದ್ದರು.