ಮಂಗಳೂರು, ಡಿ.26 (DaijiworldNews/PY): ಧರ್ಮಸ್ಥಳದಲ್ಲಿ ನಡೆದ ಲಕ್ಷದೀಪೋತ್ಸವದ ಸಂದರ್ಭ ಸುದ್ದಿಗೆ ಗ್ರಾಸವಾಗಿದ್ದ ಎತ್ತಿನ ಕಾರು ಬಂಡಿ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಮುಖ್ಯಸ್ಥ ಆನಂದ ಮಹೀಂದ್ರ ಅವರು, ಎತ್ತಿನ ಕಾರು ಬಂಡಿಯ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಟ್ವೀಟ್ ಮಾಡಿರುವ ಆನಂದ ಮಹೀಂದ್ರಾ ಅವರು, "ಇದಕ್ಕಿಂತ ಕಡಿಮೆ ವೆಚ್ಚದ ಇಂಧನವನ್ನು ಬಳಸುವ ಕಾರನ್ನು ತಯಾರಿಸಬಹುದೆಂದು ನಾನು ಭಾವಿಸುವುದಿಲ್ಲ" ಎಂದಿದ್ದಾರೆ.
ಕಾರಿನ ಹಿಂಭಾಗ ರಚನೆಯ ಜೊತೆ ಮುಂದೆ ಎರಡು ಎತ್ತುಗಳು ಕಟ್ಟಿರುವ ಬಂಡಿ ಇದ್ದು, ರೈತನೋರ್ವ ಈ ಬಂಡಿಯನ್ನು ಓಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ ಈ ಎತ್ತಿನ ಕಾರು ಬಂಡಿ ಮೂಡಿ ಬಂದಿದೆ.