ಕಾಸರಗೋಡು , ಡಿ.26 (DaijiworldNews/PY): ವಿದ್ಯುತ್ ತಂತಿ ಲಾರಿಗೆ ಸಿಲುಕಿ ಕಂಬ ಮುರಿದು ಬಿದ್ದ ಪರಿಣಾಮ ಕೆಎಸ್ಇಬಿ ನೌಕರರೋರ್ವರು ಮೃತಪಟ್ಟ ದಾರುಣ ಘಟನೆ ಶನಿವಾರ ಸಂಜೆ ಮಂಜೇಶ್ವರ ಸಮೀಪದ ಮಜಿಬೈಲ್ ಮೂಡಂಬೈಲ್ನಲ್ಲಿ ನಡೆದಿದೆ.

ಮುಳ್ಳೇರಿಯ ತೋಟದ ಮೂಲೆಯ ಉದಯ (45) ಮೃತಪಟ್ಟವರು.
ವಿದ್ಯುತ್ ಕಂಬಕ್ಕೆ ಹತ್ತಿ ತಂತಿಯನ್ನು ಎಳೆಯುತ್ತಿದ್ದಾಗ ಈ ದಾರಿಯಾಗಿ ಬಂದ ಲಾರಿಗೆ ತಂತಿ ಸಿಲುಕಿದ ಪರಿಣಾಮ ಈ ಘಟನೆ ನಡೆದಿದೆ.
ತಂತಿ ಸಿಲುಕಿಕೊಂಡ ಲಾರಿ ಮುಂದಕ್ಕೆ ಸಾಗಿದ್ದು, ಇದರಿಂದ ಕಂಬ ಮುರಿದು ರಸ್ತೆಗೆ ಬಿದ್ದ ಪರಿಣಾಮ ಉದಯ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣವಾದ ಲಾರಿ 200 ಮೀಟರ್ ನಷ್ಟು ಮುಂದಕ್ಕೆ ಸಾಗಿತ್ತು ಎನ್ನಲಾಗಿದೆ.
ಲಾರಿ ಚಾಲಕನ ನಿರ್ಲಕ್ಷ ಘಟನೆಗೆ ಕಾರಣ ಎನ್ನಲಾಗಿದೆ. ಉದಯ ಅವರು ಮಂಜೇಶ್ವರ ಕೆ ಎಸ್ಇಬಿ ಕಚೇರಿ ನೌಕರರಾಗಿದ್ದರು.
ಘಟನೆಯ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.