ಕಾಸರಗೋಡು , ಡಿ.26 (DaijiworldNews/PY): ಡಿವೈಎಫ್ಐ ಕಾರ್ಯಕರ್ತ ಕಲ್ಲೂರಾವಿ ಹಳೆ ಕಡಪ್ಪುರದ ಅಬ್ದುಲ್ ರಹಮಾನ್ (30) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ತನಿಖಾ ತಂಡ ಬಂಧಿಸಿದೆ.

ಬಂಧಿತರನ್ನುಇರ್ಷಾದ್, ಹಸನ್ ಹಾಗೂ ಆಶೀರ್ ಎಂದು ಗುರುತಿಸಲಾಗಿದೆ. ಮೂವರು ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘರ್ಷಣೆ ಸಂದರ್ಭದಲ್ಲಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಇರ್ಷಾದ್ ಅವರನ್ನು ಶುಕ್ರವಾರ ಬೆಳಿಗ್ಗೆ ಕಾಸರಗೋಡಿಗೆ ಕರೆತರಲಾಯಿತು. ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ಇರ್ಷಾದ್ ಅವರನ್ನು ಚಿಕಿತ್ಸೆಗಾಗಿ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇರ್ಷಾದ್ನಿಂದ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಹಸನ್ ಮತ್ತು ಆಶೀರ್ ಅವರನ್ನು ಬಂಧಿಸಿದರು.
ಪ್ರಕರಣವನ್ನು ಕ್ರೈಂ ಬ್ರಾಂಚ್ಗೆ ಒಪ್ಪಿಸಲಾಗಿದ್ದು, ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.