ಕಾಸರಗೋಡು, ಡಿ. 27 (DaijiworldNews/HR): ಉಪ್ಪಳ ನಯಾಬಜಾರ್ ಪರಿಸರದಲ್ಲಿ ವ್ಯಾಪಾರ ಮಳಿಗೆಗಳಲ್ಲಿ ಸರಣಿ ಕಳ್ಳತನ ಇಂದು ಬೆಳಕಿಗೆ ಬಂದಿದ್ದು ಮೆಡಿಕಲ್ ಶಾಪ್, ದಿನಸಿ ಅಂಗಡಿ, ಟಯರ್ ಅಂಗಡಿ ಸೇರಿದಂತೆ ಎಂಟಕ್ಕೂ ಅಧಿಕ ಕಡೆಗಳಲ್ಲಿ ಕಳವು ನಡೆಸಲಾಗಿದೆ.




ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇವರ ಬಗ್ಗೆ ಮಾಹಿತಿ ಲಭಿಸಿದವರು ಕುಂಬಳೆ ಠಾಣಾ ಸಬ್ ಇನ್ಸ್ ಪೆಕ್ಟರ್ 9797980924 ಅಥವಾ 9497987218 ತಿಳಿಸುವಂತೆ ಕೋರಲಾಗಿದೆ.