ಮಂಗಳೂರು, ಡಿ. 27 (DaijiworldNews/HR): ಕೊಡಿಯಾಲ್ಬೈಲ್ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಶಿವಳ್ಳಿ ಸ್ಪಂದನದ ವತಿಯಿಂದ ರಕ್ತದಾನ ಶಿಬಿರ ವೃಂದಾವನಸ್ಥ ಪೇಜಾವ ಶ್ರೀ ವಿಶ್ವೇಶ ತೀರ್ಥರ ಸಂಸ್ಮರಣೆಯ ಪ್ರಯುಕ್ತ ರೆಡ್ ಕ್ರಾಸ್ ಸಹಯೋಗದಲ್ಲಿ ನಡೆಯಿತು.




ಸುಧಾಕರ್ ರಾವ್ ಪೇಜಾವರರು ಶಿವಳ್ಳಿ ಸ್ಪಂದನ ತಾಲೂಕು ಕಾರ್ಯದರ್ಶಿ ಗಣೇಶ ಹೆಬ್ಬಾರ್, ವಲಯಾದ್ಯಕ್ಷ ನಾರಾಯಣ ಭಟ್ ಹಾಗೂ ಇತರ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಮಂಗಳೂರಿನ ಶಿವಳ್ಳಿ ಸ್ಪಂದನದ 12 ವಲಯಗಳ ಪದಾಧಿಕಾರಿಗಳು, ಸದಸ್ಯರು ಮಹಿಳೆಯರೂ ಸೇರಿದಂತೆ ನೂರಾರು ಮಂದಿ ರಕ್ತದಾನ ಮಾಡಿದ್ದು, ಜನರ ಸಾಮಾಜಿಕ ಕಳಕಳಿ ಕಣ್ಣಿಗೆ ಕಟ್ಟಿದಂತಿತ್ತು.
ಶಾರದಾ ಸಮುಹ ಸಂಸ್ಥೆಗಳ ಅಧ್ಯಕ್ಷರು ಎಂ ಬಿ ಪುರಾಣಿಕ್ ಮಾತನಾಡಿ, "ಪೇಜಾವರ ಶ್ರೀಗಳು ವಾಯುದೇವರ ಅವತಾರವಾಗಿದ್ದರು" ಎಂದು ಶಿವಳ್ಳಿ ಬ್ರಾಹ್ಮಣ ಸಮುದಾಯದ ಒಗ್ಗೂಡುವಿಕಯನ್ನು ಪ್ರಶಂಶಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, "ಸದಾ ಸಮಾಜದ ಏಳಿಗೆಗಾಗಿ ಶ್ರಮಿಸಿದ ಸ್ವಾಮಿಜಿಯ ನೆನಪಿಗೆ ಇಂದು ರಕ್ತದಾನದ ಮೂಲಕ ರಕ್ತ ತರ್ಪಣ" ಎಂದರು.
ಶಿಬಿರದಲ್ಲಿ ಸುಮಾರು ಇನ್ನೂರು ಮಂದಿ ರಕ್ತದಾನ ಮಾಡಿದ್ದಾರೆ.