ಕಾಸರಗೋಡು, ಡಿ.28 (DaijiworldNews/PY): ಕಾಸರಗೋಡು ನಗರಸಭಾ ಅಧ್ಯಕ್ಷರಾಗಿ ಮುಸ್ಲಿಂ ಲೀಗ್ನ ನ್ಯಾಯವಾದಿ ವಿ. ಎಂ. ಮುನೀರ್ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.


ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಶಿಕ್ಷಕಿ ಸವಿತಾ ಅವರನ್ನು ಮತಗಳ ಅಂತರದಿಂದ ಸೋಲಿಸಿದರು. ಮುನೀರ್ 21 ಹಾಗೂ ಶಿಕ್ಷಕಿ ಸವಿತಾ 14 ಮತಗಳನ್ನು ಪಡೆದರು.
ಸಿಪಿಎಂ ಸದಸ್ಯೆ ಲಲಿತಾ, ಇಬ್ಬರು ಪಕ್ಷೇತರ ಸದಸ್ಯರಾದ ಫಾತಿಮತ್ ಹಸೀನಾ ಮತ್ತು ಕೆ.ಎಂ ಶಕೀನಾ ಮೊಯ್ದಿನ್ ಮತದಾನದಿಂದ ಹೊರಗುಳಿದರು.
ಅಬ್ಬಾಸ್ ಬೀಗಂ ಅವರು ಮುನೀರ್ ಅವರ ಹೆಸರು ಸೂಚಿಸಿದರು. ಪಿ.ರಮೇಶ್ ಶಿಕ್ಷಕಿ ಸವಿತಾ ಅವರ ಹೆಸರು ಸೂಚಿಸಿದರು.
51 ವರ್ಷದ ಮುನೀರ್ ಅವರು ತಳಂಗರೆ ಖಾಸಿಲೈನ್ ವಾರ್ಡ್ನಿಂದ ಗೆಲುವು ಸಾಧಿಸಿದ್ದರು.
38 ಸದಸ್ಯ ಬಲದಲ್ಲಿ ಮುಸ್ಲಿಂ ಲೀಗ್ 21, ಬಿಜೆಪಿ 12, ಸಿಪಿಎಂ 1, ಪಕ್ಷೇತರು 2 ಸ್ಥಾನಗಳನ್ನು ಪಡೆದಿದ್ದಾರೆ.