ಕಡಬ, ಡಿ. 28(DaijiworldNews/SM): ಗ್ರಾಮ ಪಂಚಾಯತ್ ಚುನಾವಣೆಯ ನಿಮಿತ್ತ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೋರ್ವರಿಗೆ ಸಿಕ್ಕಿದ ಎರಡು ಚಿನ್ನದ ಉಂಗುರಗಳನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ ಹಿಂತಿರುಗಿಸಿದ ಘಟನೆ ಕುಂತೂರಿನಲ್ಲಿ ನಡೆದಿದೆ.

ಕುಂತೂರು ಹಿರಿಯ ಪ್ರಾಥಮಿಕ ಶಾಲೆಯ ಕುಂತೂರು ಪದವು ಎಂಬಲ್ಲಿ ಕರ್ತವ್ಯದಲ್ಲಿದ್ದ ಕಡಬ ಠಾಣಾ ಪೊಲೀಸ್ ಪೊಲೀಸ್ ಸಿಬ್ಬಂದಿ ಗೋವಿಂದರಾಜು ಎಂಬವರಿಗೆ ಶಾಲಾ ಆವರಣದಲ್ಲಿ ಎರಡು ಚಿನ್ನದ ಉಂಗುರಗಳು ಸಿಕ್ಕಿತ್ತು. ಉಂಗುರಗಳನ್ನು ಕಡಬ ಠಾಣೆಗೆ ತಂದು ಒಪ್ಪಿಸಿದ್ದರು. ಇದು ಕುಂತೂರಿನ ಬಾಬುಗೌಡ ಎಂಬವರ ಪುತ್ರ ಸನತ್ ಎಂಬವರಿಗೆ ಸೇರಿದ್ದೆಂದು ಖಚಿತ ಖಚಿತಪಡಿಸಿಕೊಂಡು ವಾರಸುದಾರರನ್ನು ಠಾಣೆಗೆ ಕರೆಸಿ ಮೇಲಾಧಿಕಾರಿಗಳ ಆದೇಶದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸಿದರು. ಈ ಮೂಲಕ ಮಾನವೀಯತೆಗೆ ಸಾಕ್ಷಿಯಾದರು.