ಮಂಗಳೂರು, ಡಿ.29(DaijiworldNews/HR): ಸೋಮೇಶ್ವರ ಬೀಚ್ನಲ್ಲಿ ಮಂಗಳವಾರದಂದು ಮಹಿಳೆಯೊಬ್ಬರು ಸಮುದ್ರಕ್ಕೆ ಕಾಲು ಜಾರಿ ಬಿದ್ದಿದ್ದು, ಅವರನ್ನು ಯುವಕರ ತಂಡ ರಕ್ಷಿಸಿದ ಘಟನೆ ನಡೆದಿದೆ.

ಮಹಿಳೆಯನ್ನು ನೀರಿನಲ್ಲಿ ಕಂಡ ಅಶೋಕ್ ಸೋಮೇಶ್ವರ ಎಂಬವರು ಒಂಟಿಯಾಗಿ ಸಮುದ್ರಕ್ಕೆ ಹಾರಿ ರಕ್ಷಿಸಿದ್ದಾರೆ.
ಇನ್ನು ಅಶೋಕ್ ಅವರಿಗೆ ಕಿಶೋರ್ ಸೋಮೇಶ್ವರ ಮತ್ತು ವಿಶ್ವನಾಥ್ ಮಡಿಯಾರ್ ಎಂಬವರು ಬೆಂಬಲ ನೀಡಿದ್ದಾರೆ.