ಉಡುಪಿ, ಡಿ. 29 (DaijiworldNews/MB) : ಜೇನುನೊಣಗಳ ದಾಳಿಗೆ ಒಳಗಾದ ಯುವಕನನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ.

ಡಿಸೆಂಬರ್ 29 ರ ಮಂಗಳವಾರ ಬೆಳಿಗ್ಗೆ ಬಾಗಲಕೋಟೆ ಮೂಲದ ಯುವಕನಿಗೆ ಜೇನುನೊಣಗಳ ಗುಂಪು ದಾಳಿ ನಡೆಸಿದೆ.
ಯುವಕನ ಹೆಸರು ಪುಂಡಲಿಕ ಎಂದು ತಿಳಿದು ಬಂದಿದೆ. ಆತನನ್ನು ರಕ್ಷಿಸಿ ಚಿಕಿತ್ಸೆಗಾಗಿ ಇಲ್ಲಿನ ಅಜ್ಜರಕಾಡಿನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೇನುನೊಣಗಳ ದಾಳಿಯಿಂದಾಗಿ ಯುವಕ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು ಸಮಾಜ ಸೇವಕ ಅನ್ಸರ್ ಅಹ್ಮದ್ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರು.
ಬಾಲಕ ಪ್ರಥಮ ಪಿಯು ವಿದ್ಯಾರ್ಥಿ ಎಂದು ತಿಳಿದು ಬಂದಿದೆ.